ಮಂಡ್ಯ

ಟಿಎಪಿಸಿಎಂಎಸ್ ಚುನಾವಣೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ..!

Published

on

ಮಳವಳ್ಳಿ: ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಿರಿ ಚುನಾವಣೆ ಹಿನ್ನಲೆಯಲ್ಲಿ ನಿರೀಕ್ಷೆಯಂತೆ ಎರಡು ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ಅಧ್ಯಕ್ಷರಾಗಿ ಕುಳ್ಳಚನ್ನಂಕಯ್ಯ,ಉಪಾಧ್ಯಕ್ಷರಾಗಿ ಜೆ.ಕುಮಾರ್ ರವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಚಂದ್ರಮೌಳಿರವರು ಇಂದು ಚುನಾವಣೆ ದಿನಾಂಕವನ್ನು ನಿಗದಿ ಮಾಡಿದ ಹಿನ್ನಲೆ ಅಧ್ಯಕ್ಷ ಸ್ಥಾನಕ್ಕೆ ಕಸಬಾ ಹೋಬಳಿ ಕಾಂಗ್ರೆಸ್ ಬೆಂಬಲಿತರಾದ ಕುಳ್ಳಚನ್ನಂಕಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜಿಪುರ ಹೋಬಳಿಯ ಜೆ.ಕುಮಾರ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಪ್ರತಿಸ್ವರ್ಧಿ ಇಲ್ಲದ ಕಾರಣ ಚುನಾವಣಾಧಿಕಾರಿ ಅಧ್ಯಕ್ಷರಾಗಿ ಕುಳ್ಳಚನ್ನಂಕಯ್ಯ, ಉಪಾಧ್ಯಕ್ಷರಾಗಿ ಜೆ.ಕುಮಾರ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಕಳೆದ ತಿಂಗಳ ಸೆ.30 ರಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅದರಲ್ಲಿ 11 ಮಂದಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಜಯಶೀಲರಾಗಿದ್ದು,ಕೇವಲ 2 ಮಂದಿ ಜೆಡಿಎಸ್ ಬೆಂಬಲಿತರು ಮಾತ್ರ ಜಯ ಶೀಲಾರಾಗಿದ್ದರು. ಈಗಾಗಲೇ ಮಾಜಿ ಸಚಿವ. ಪಿ.ಎಂ ನರೇಂದ್ರಸ್ವಾಮಿರವರ ನಿವಾಸದಲ್ಲಿ ಸಭೆ ನಡೆದಿದ್ದು. ಎಲ್ಲಾ 11 ಮಂದಿ ನಿರ್ದೇಶಕರನ್ನು ಸೇರಿಸಿ ಮಾತುಕತೆ ನಡೆಸಿದ್ದು, ಎಲ್ಲಾ ನಿರ್ದೇಶಕರು ಒಮ್ಮತವಾಗಿ ಆಯ್ಕೆ ಮಾಡಲಾಗಿದೆ. ಒಟ್ಟಿನಲ್ಲಿ ಈ ಚುನಾವಣೆ ಸ್ಥಳೀಯ ಸಂಘ ಸಂಸ್ಥೆ ಚುನಾವಣೆಯಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರತಿಷ್ಠೆಯಾಗಿದ್ದು, ಈ ಭಾರಿ ಶಾಸಕರಿಗೆ ಬಾರಿ ಮುಖಭಂಗವಾಗಿದೆ. ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ರವರು ತಮ್ಮ ಬೆಂಬಲಿತರಿಗೆ ಅಧಿಕಾರ ದೊರಕಿಸಿ ಕೊಡುವಲ್ಲಿ ಯಶ್ವಸಿಯಾಗಿದ್ದಾರೆ. ನೂತನ ಅಧ್ಯಕ್ಷ ಕುಳ್ಳಚನ್ನಂಕಯ್ಯ ಮಾತನಾಡಿ ,ಟಿಎಪಿಸಿಎಂಎಸ್ ನಿಂದ. ಸದ್ಯದಲ್ಲೇ ಪೆಟ್ರೋಲ್ ಬಂಕ್ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version