Uncategorized

ಕೊರೊನಾ ಸಮಯದಲ್ಲಿ ಛಾಯ ಗ್ರಾಹಕರನ್ನು ನಿರ್ಲಕ್ಷಿಸಿದ ಸರ್ಕಾರ..!

Published

on

ಸಿರವಾರ: ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರವು ಲಾಕ್ ಡೌನ್ ಘೋಷಿಸಿದ ಪರಿಣಾಮ, ಛಾಯಾ ಗ್ರಾಹಕರ ಬದುಕು ಬಿದಿಗೆ ಬಂದಿದೆ. ಯಾವುದೇ ಮದುವೆ ಮತ್ತಿತರ ಶುಭ ಸಮಾರಂಭಗಳು ಇಲ್ಲದಿರುವುದರಿಂದ,ವೃತ್ತಿ ಅವಲಂಬಿತ ಛಾಯಾಗ್ರಹಕನಿಗೆ, ಕರೆಂಟ್ ಬಿಲ್, ಮನೆ ಬಿಲ್, ಹಾಗೂ ಸಾಲದ ಹೊರೆಯಿಂದ ಜೀವನ ನಡೆಸಲು ಕಷ್ಟವಾಗಿದೆ.ಈ ಬಗ್ಗೆ ಸರಕಾರಕ್ಕೆ ವಿವಿಧ ಬಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.ಕೆಲವು ಆಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ ಹಲವು ವರ್ಗಗಳಿಗೆ ಪರಿಹಾರ ಧನ ನೀಡಿದ್ದು, ನಮ್ಮ ಛಾಯಾ ವ್ರತ್ತಿಯನ್ನು ಅವಲಂಬಿಸಿರುವ ನಮ್ಮ ಸಮುದಾಯವನ್ನು ಕೈ ಬಿಟ್ಟಿರುತ್ತೀರಿ. ಕಾರಣ ಆಕ್ಟೊಬರ್ 31 ,2020 ಶನಿವಾರದಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಿರವಾರ ತಹಶೀಲ್ದಾರ್ ರಿಗೆ ಮನವಿಯನ್ನು ಸಲ್ಲಿಸಿದರು.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ.

Click to comment

Trending

Exit mobile version