ಮಂಡ್ಯ

ಲೋಕೋಪಯೋಗಿ ಇಲಾಖೆ ಸೇರಿದ ಜಾಗದಲ್ಲಿ ಆಕ್ರಮವಾಗಿ ತಲೆ ಎತ್ತಿದೆ ದೊಡ್ಡ ಕಟ್ಟಡ..!

Published

on

ಮಳವಳ್ಳಿ: ಅಕ್ರಮ ಕಟ್ಟಡ ತಲೆ ಎತ್ತಿರುವ ಬಗ್ಗೆ ಇಡೀ ಗ್ರಾ.ಪಂ ಸದಸ್ಯರುಗಳು ಹೋರಾಟ ಮಾಡುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ಬೆಂಬಲ ನೀಡುತ್ತಿಲ್ಲ. ಇದರ ಹಿಂದೆ ಮಂಡ್ಯ ಉಸ್ತುವಾರಿ ಸಚಿವರ ಕುಮ್ಮಕ್ಕು ಇದೆ ಎಂದು ಬೆಳಕವಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ. ಸೋಮು ಆರೋಪಿಸಿದರು. ಮಳವಳ್ಳಿ ತಾಲ್ಲೂಕು ಬೆಳಕವಾಡಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಸೇರಿದ ಜಾಗದಲ್ಲಿ ಗ್ರಾಮಪಂಚಾಯಿತಿಯ ಅನುಮತಿ ಪಡೆಯದೆ ಕಟ್ಟಡವನ್ನು ಕಟ್ಟಲಾಗಿದೆ. ಈಗಾ ಗ್ರಾಮ ಪಂಚಾಯಿತಿಯಿಂದ ನೋಟಿಸ್ ನೀಡಿದ್ದು,ನ್ಯಾಯಾಲಯದ ಹಂತದಲ್ಲಿ ಯತ್ತಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿದ್ದರೂ ಹೋಟೆಲ್ ಪ್ರಾರಂಭ ಮಾಡಿದ್ದು ಕಾನೂನು ಬಾಹಿರವಾಗಿದೆ. ಇದಕ್ಕೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಮೇಲ್ಮಟ್ಟದ ರಾಜಕಾರಣಿಗಳ ಕುಮ್ಮಕ್ಕು ಇದೆ .ಶಾಸಕರು ಸಹ ಹೋರಾಟಕ್ಕೆ ಬೆಂಬಲ ನೀಡಿದ್ದರೂ ಅಧಿಕಾರಿಗಳು ಉಸ್ತುವಾರಿ ಸಚಿವರ ಒತ್ತಡಕ್ಕೆ ಮಣಿದು ಅವರ ಪರ ಇದ್ದಾರೆ. ಈ ಸಂಬಂಧ ನ್ಯಾಯ ಸಿಗದಿದ್ದರೆ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಹೋರಾಟಕ್ಕೆ ಸಿದ್ದ ಎಂದು ಸವಾಲು ಎಸೆದರು.ಇನ್ನೂ ಬೆಳಕವಾಡಿ ಗ್ರಾಮಕ್ಕೆ ಮಾಧವಮಂತ್ರಿ ನಾಲಾ ಆಧುನಿಕರಣ ಉದ್ಘಾಟನಾ ಸಮಾರಂಭಕ್ಕೆ ಉಸ್ತುವಾರಿ ಸಚಿವರು ಸದ್ಯದಲ್ಲೆ ಬರಲಿದ್ದು, ಆ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರುಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯ ಗುರುಸ್ವಾಮಿ, ಮಾಜಿ ಅಧ್ಯಕ್ಷ ವೆಂಕಟೇಶ್ ,ಸ್ಥಾಯಿ ಸಮಿತಿ ಅಧ್ಯಕ್ಷೆ ಮಹೇಶ್ವರಿ ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version