Uncategorized

ರೈತರ ಅನುಕೂಲಕ್ಕಿರುವ ಸಬ್ಸಿಡಿ ದರದಲ್ಲಿನ ಯೋಜನೆ ಸದ್ಬಳಕೆ ಆಗುತ್ತಿಲ್ಲ- ರಮೇಶ್ ನಾಯಕ

Published

on

ದೇವದುರ್ಗ : ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ರೈತರ ಅನುಕೂಲಕ್ಕೆ ಸಬ್ಸಿಡಿ ದರದಲ್ಲಿ ಹಲವಾರು ಯೋಜನೆಗಳು ಸರಕಾರ ಜಾರಿಗೆ ತರುತಿದ್ದು ಸರ್ಕಾರದ ಯೋಜನೆಗಳಲ್ಲಿ ರೈತರಿಗೆ ಸರಿಯಾಗಿ ಸದ್ಬಳಕೆ ಆಗುತ್ತಿಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀಡದೇ ಹೆಚ್ಚಿಗೆ ಹಣ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ರೈತ ಮುಂಖಡ ರಮೇಶ್ ನಾಯಕ ಆರೋಪಿಸಿದ್ದಾರೆ, ಮಳೆರಾಯನ ಕೋಪ ರೈತನ ಮೇಲೆ ಅನ್ನುವ ಹಾಗೇ ಮಳೆರಾಯನ ಅರ್ಭಟ ಹೆಚ್ಚಾಗಿದ್ದು. ಜಮೀನಿನಲ್ಲಿ ಬೆಳೆದ ಬೆಳೆಗಳು ಕೊಳೆತು ಹೋಗುವ ಸಂಕಷ್ಟಕ್ಕೆ ಸಿಲುಕಿದ್ದು ಒಂದು ಕಡೆಯಾದರೆ ಇನ್ನೊಂದೆಡೆ ಸರಕಾರದಿಂದ ರೈತರಿಗೆ ಕೃಷಿ ಇಲಾಖೆ ಮೂಲಕ ಸಿಗುವಂತಹ ಅಗತ್ಯ ಸೌಲಭ್ಯಗಳು ಪಡೆಯಬೇಕಾದರೆ ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆ. ಎಸ್.ಸಿ. ಎಸ್.ಟಿ ಜನಾಂಗದವರು ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ 1 ವರ್ಷವಾದರೂ ತಾಡಪಲ್ ನೀಡುತ್ತಿಲ್ಲ. ದಿನಬೆಳಗಾದರೆ ರೈತರು ಕಛೇರಿಗೆ ಅಲೇದಾಡಿದರು ಸೌಲಭ್ಯಗಳು ಸಿಗುತ್ತಿಲ್ಲ, ದೇವದುರ್ಗ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ 2019 ನೇ ಸಾಲಿನ ಬಂದಂತಹ ಅನುಧಾನದಲ್ಲಿ ರೈತರಿಗೆ ತಾಡಪಲ್ ವಿತರಣೆ ಮಾಡುತ್ತಿದ್ದು, ವಿತರಣೆ ಮಾಡುವಲ್ಲಿ ಅಧಿಕಾರಿಗಳು ತಾರತಮ್ಯದಿಂದ ಶ್ರೀಮತಂತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ತಾಲೂಕಿನಲ್ಲಿ ಪ್ರಸಕ್ತ ವರ್ಷ ರೈತರಿಗೆ ರೈತ ಸಂಪರ್ಕ ಕೇಂದ್ರದಿಂದ ರೈತರಿಗಾಗಿ ನೀಡುವ ತಾಡಪಲ್ ಹಂಚಿಕೆಯಲ್ಲಿ ಅಧಿಕಾರಿಗಳು ಬಡ ರೈತರ ಹೆಸರಲ್ಲಿ ಬರುವ ಸಬ್ಸಿಡಿ ದರದ ಪರಿಕರಗಳು ಉಳ್ಳವರಿಗೆ ನೀಡುತ್ತಿದ್ದು,ರೈತರಿಗೆ ಸಿಗಬೇಕಾದ ಸಣ್ಣ ಅತಿ ಸಣ್ಣ ಕೃಷಿ ಪರಿಕರಗಳು ರೈತರಿಗೆ ಸಿಗುತ್ತಿಲ್ಲ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಉಳ್ಳವರ ಪಾಲು ಮಾಡುತ್ತಿದ್ದಾರೆ. ಇಲಾಖೆಯ ವತಿಯಿಂದ ಎಸ್.ಸಿ. ಎಸ್.ಟಿ ಜನರಿಗೆ 400 ರೂ ಇದ್ದು, ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಶೇ 50 ರಷ್ಟು ಸಬ್ಸಿಡಿ ಧರದಲ್ಲಿ ನೀಡಬೇಕಾದ ಅಧಿಕಾರಿಗಳು ಸಾಮಾನ್ಯ ವರ್ಗದ ದರದಂತೆ 1200 ರೂ ರೈತರಿಗೆ ಹಣ ಪಾವತಿಸಿ ಸೌಲಭ್ಯ ಪಡೆಯುವಂತೆ ಹೇಳುತ್ತಾರೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.

ವರದಿ-ಸುರೇಶ್ ಭವಾನಿ ಎಕ್ಸ್ ಪ್ರೆಸ್ ನ್ಯೂಸ್ ದೇವದುರ್ಗ

Click to comment

Trending

Exit mobile version