ಲಿಂಗಸೂಗೂರು

ವಿದ್ಯುತ್ ಕಣ್ಣಾ ಮುಚ್ಚಾಲೆ- ಕರವೇಯಿಂದ ಜೆಸ್ಕಾಂ ಇಲಾಖೆಗೆ ಮನವಿ..!

Published

on

ಲಿಂಗಸುಗೂರು: ಲಿಂಗಸುಗೂರು ಪಟ್ಟಣವೂ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ನಿರಂತರವಾಗಿ ಕಣ್ಣಾಮುಚ್ಚಾಲೆ ಆಡುತ್ತಿದೆ. ಹಗಲಿರುಳೆನ್ನದೇ ವಿದ್ಯುತ್ ಕಡಿತಗೊಳ್ಳುತ್ತಲೇ ಇರುತ್ತದೆ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಆಗುವುದು ಸಾಮಾನ್ಯ .ಆದರೆ ಮಳೆಗಾಲದಲ್ಲೂ ಅದರಲ್ಲೂ ಮಳೆ – ಗಾಳಿ ಇಲ್ಲದ ಸಮಯದಲ್ಲೂ ವಿನಾಕಾರಣ ಕರೆಂಟ್ ಕಟ್ ಮಾಡುತ್ತಿರುವ ಅಧಿಕಾರಿಗಳ ಕ್ರಮ ಖಂಡನೀಯ. ಈ ಬಗ್ಗೆ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಲಿಂಗಸುಗೂರು ಪಟ್ಟಣದಲ್ಲಂತೂ ಮನ ಬಂದಂತೆ ಕರೆಂಟ್ ಕಟ್ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ತಮಗೆ ಯಾವ ಮಾಹಿತಿಯೂ ಇಲ್ಲವೆಂದು ಸಬೂಬು ಹೇಳುತ್ತಾ , ಒಬ್ಬರ ಮೇಲೊಬ್ಬರು ನೆಪ ಹೇಳುತ್ತಾರೆ. ಸಾರ್ವಜನಿಕರ ಸೇವೆಗಾಗಿ ಇರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುವುದಿಲ್ಲ. ಜನಸಾಮಾನ್ಯರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟುವುದು ತಡವಾದರೆ , ನೇರವಾಗಿ ಮನೆಗಳಿಗೆ ತೆರಳಿ ವಿದ್ಯುತ್ ಸಂಪರ್ಕ ಕಟ್ ಮಾಡಲು ಜೆಸ್ಕಾಂ ಸಿಬ್ಬಂಧಿಗಳು ಮುಂದಾಗುತ್ತಾರೆ . ಆದರೆ , ಸಮಯಕ್ಕೆ ಸರಿಯಾಗಿ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲವೆಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ . ಕೂಡಲೇ ತಾವುಗಳು ಲಿಂಗಸುಗೂರು ತಾಲೂಕಿನಲ್ಲಿರುವ ವಿದ್ಯುತ್ ಸಮಸ್ಯೆಯನ್ನು ಪರಿಶೀಲಿಸಿ , ಸೂಕ್ತ ಕ್ರಮಕ್ಕೆ ಮುಂದಾಗಬೇಕು .ವಿನಾಕಾರಣ ವಿದ್ಯುತ್ ಕಡಿತಮಾಡುವ ಅಧಿಕಾರಿಗಳ ಹಾಗೂ ಸಿಬ್ಬಂಧಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಮೂಲಕ ಹೋರಾಟಕ್ಕೆ ಮುಂದಾಗುತ್ತೇವೆಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಲಿಂಗಸುಗೂರು ತಾಲೂಕ ಅಧ್ಯಕ್ಷ ಜಿಲಾನಿ ಪಾಶಾ ಜೆಸ್ಕಾಂ ಅಧಿಕಾರಿಗಳಿಗೆ ಹೇಳಿದರು. ಲಿಂಗಸಗೂರು ಜೆಸ್ಕಾಂ ಎಇಇ ಮೂಲಕ ಕಾರ್ಯನಿರ್ವಾಹಕ ನಿರ್ದೇಶಕರು ಜೆಸ್ಕಾಂ ಇಲಾಖೆ ಗುಲ್ಬರ್ಗ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Click to comment

Trending

Exit mobile version