ರಾಯಚೂರು

ನೀರಿನಲ್ಲಿ ಕೊಚ್ಚಿ ಹೋದ ಯುವಕನ ಕುಟುಂಬಕ್ಕೆ 50 ಸಾವಿರ ರೂ.ಸಹಾಯ ಧನ..

Published

on

ರಾಯಚೂರು:ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ರವಿವಾರ ಹಿರೇ ಹಳ್ಳದಲ್ಲಿ ಮಾರಲದಿನ್ನಿ ಜಲಾಶಯದಿಂದ ಹೆಚ್ಚುವರಿ ನೀರು ಹರಿಬಿಟ್ಟ ಹಿನ್ನಲೆ ಮಸ್ಕಿ ಪಟ್ಟಣದ ಯುವಕರಿಬ್ಬರು ಬೆಳಗಿನ ಜಾವ ಎಂದಿನಂತೆ ತಮ್ಮ ನಿತ್ಯಕರ್ಮಗಳಿಗೆ ಹಳ್ಳದ ಕಡೆ ಹೋಗಿದ್ದರು. ಕೆಲವೇ ಹೊತ್ತಿನಲ್ಲಿ ಹಳ್ಳಕ್ಕೆ ಏಕಾಏಕಿ ನೀರು ರಭಸವಾಗಿ ಹರಿದು ಬಂದಿದ್ದರ ಪರಿಣಾಮ ಹೋದ ಯುವಕರು ಹಳ್ಳದಿಂದ ಮರಳಿ ಬರಲಾಗದೇ ಪ್ರವಾಹಕ್ಕೆ ಸಿಲುಕಿ ಹಳ್ಳದ ಮಧ್ಯ ಭಾಗದಲ್ಲಿ ಸಿಲುಕಿದ್ದರು. ನಂತರ ಜಂಟಿ ಕಾರ್ಯಚರಣೆ ನಡೆಸಿ ಒಬ್ಬ ಯುವಕನನ್ನು ರಕ್ಷಿಸಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಚನ್ನಬಸವ ಮಡಿವಾಳ ಎಂಬ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದು ಶೋಧ ಕಾರ್ಯ ಕಳೆದ ಮೂರು ದಿನಗಳಿಂದ ನಡಯುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿ ಇದಕ್ಕೆಲ್ಲ ಕಾರಣ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ.ಇದನ್ನು ಅರಿತ ಮಸ್ಕಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ನೇತೃತ್ವದಲ್ಲಿ 50 ಸಾವಿರ ಸಹಾಯ ಧನವನ್ನು ನೀಡಿ ಚೆನ್ನಬಸವನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Click to comment

Trending

Exit mobile version