Uncategorized

ಬೌದ್ಧ ಧರ್ಮ ಈ ದೇಶದ ನೆಲದ ಧರ್ಮ_ ಸಿದ್ದಣ್ಣ ಪರಮೇಶ್ವರ್..!

Published

on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ 64 ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಮತ್ತು ಮಹಾನಾಯಕ ಧಾರಾವಾಹಿಯ ಬ್ಯಾನರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಣ್ಣ ಪರಮೇಶ್ವರ್ ಜಗತ್ತಿಗೆ ಶಾಂತಿ, ನೆಮ್ಮದಿಗೆ ಗೌತಮ ಬುದ್ದ ಹುಟ್ಟು ಹಾಕಿರುವ ಬೌದ್ಧ ಧರ್ಮದ ತತ್ವ ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕು,ನಮ್ಮ ನಡೆ ಬುದ್ದನ ಕಡೆಗೆ ಸಾಗಬೇಕು ಎಂದು ಹೇಳಿದರು.. ಡಾ.ಬಿ.ಆರ್.ಅಂಬೇಡ್ಕರ್ ರವರು ಭಾರತದ ಸಂವಿಧಾನವು ಧರ್ಮ-ಪಂಥ ಮೀರಿ ಎಲ್ಲರಿಗೂ ಸಮಾನತೆಯ, ಭಾತೃತ್ವ, ಸ್ವಾತಂತ್ರ್ಯದ ಸಮಾನ ಹಕ್ಕು ನೀಡಿ ಎಲ್ಲರ ಗೌರವಯುತ ಬದುಕಿಗೆ ಕಾರಣವಾಗಿದೆ.ಅಕ್ಟೋಬರ್ 14-1956 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬುದ್ಧನ ಆಚಾರ ವಿಚಾರಗಳು ಸರ್ವಕಾಲಿಕ ಸತ್ಯವಾಗಿದ್ದು, ಅದನ್ನು ವಿಶ್ವಕ್ಕೆ ಪ್ರಚೂರಪಡಿಸುವ ಕಾರ್ಯ ಆಗಬೇಕು. ದೇಶದ ಅಭಿವೃದ್ಧಿಗೆ ನಮ್ಮಲ್ಲಿನ ಧರ್ಮ-ಜಾತಿ ವ್ಯವಸ್ಥೆ ಅಡ್ಡವಾಗಿದ್ದು, ಇದನ್ನು ಮೀರಿ ನಾವೆಲ್ಲರು ಮನುಷ್ಯ ಜಾತಿ ಎಂದು ತಿಳಿದು ಪರಸ್ಪರ ಅಭಿವೃದ್ಧಿ ಹೊಂದಬೇಕಾಗಿದೆ. ಧರ್ಮದ ಹೆಸರಿನಲ್ಲಿ ಇಂಥದೆ ಕಾಯಕವನ್ನು ಮಾಡು ಎಂದು ಹೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಧರ್ಮದ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು.

ವರದಿ-ಸುರೇಶ್ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ

Click to comment

Trending

Exit mobile version