ಮಂಡ್ಯ

ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಬೀಗ-ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ..!

Published

on

ಮಳವಳ್ಳಿ: ಧನಗೂರು ಗ್ರಾಮಪಂಚಾಯಿತಿ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಬೀಗ ಜಡಿದ ಹಿನ್ನಲೆಯಲ್ಲಿ ಧನಗೂರು ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು. ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಸಾಧಿಕ್ ಪಾಷ ನೇತೃತ್ವದಲ್ಲಿ ಶಾಸಕ ಡಾ. ಕೆ ಅನ್ನದಾನಿ ಹಾಗೂ ತಾ.ಪಂ ಇಓ ಸತೀಶ್ ವಿರುದ್ದ ಘೋಷಣೆ ಕೂಗಿದರು. ಇನ್ನೂ ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಇಓ ಸತೀಶ್ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರುವ ಕೆಲಸ ನಿರ್ವಹಿಸುತ್ತಿದ್ದ ಕಚೇರಿಗೆ ಬೀಗ ಹಾಕಿ ಮತ್ತೆ ಹಳೆಯ ಕಚೇರಿಗೆ ಏಕೆ ಮಾಡಿದ್ದೀರಿ ಉತ್ತರಿಸಿ ಎಂದು ಇಓ ಸತೀಶ್ ತರಾಟೆಗೆ ತೆಗೆದುಕೊಂಡರು.ಇಓ ಸತೀಶ್ ರವರು ನಮ್ಮ ಕಡೆಯಿಂದ ಉದ್ಘಾಟನೆಯಾಗಿಲ್ಲ ಎಂದು ಉತ್ತರಿಸುತ್ತಿದ್ದಂತೆ ತಾ.ಪಂ ಉಪಾಧ್ಯಕ್ಷ ಮಾಧುರವರು ಇದು ರಾಜ್ಯ ಸರ್ಕಾರದ ಯೋಜನೆಯಲ್ಲ, ಇಂದು ಕೇಂದ್ರ ಸರ್ಕಾರದ ಯೋಜನೆ ಅದಕ್ಕೆಸಂಸದೆ ಸುಮಲತಾ ರವರು ದಿನಾಂಕ ನಿಗದಿ ಪಡಿಸಿದ್ದರು, ಅದರಂತೆ ಉದ್ಘಾಟನೆಯಾಗಿದೆ. ಅದಕ್ಕೆ ತಾ.ಪಂ ಉಪಾಧ್ಯಕ್ಷನಾಗಿ ಹೋಗಿದ್ದೆ. ಇದಲ್ಲದೆ ತಾ.ಪಂ ಅಧ್ಯಕ್ಷರು, ಜಿ.ಪಂ ,ಸದಸ್ಯರು,ತಾ.ಪಂ ಸದಸ್ಯರು, ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಸಹ ಭಾಗವಹಿಸಿದ್ದವು ಎಂದರು.ಕೊನೆಗೆ ಇಓ ಸತೀಸ್ ರವರು ಇನ್ನೂ ಎರಡು ಮೂರುದಿನಗಳಲ್ಲಿ ಮೇಲಾಧಿಕಾರಿಗಳ ಚರ್ಚೆ ನಡೆಸುವುದಾಗಿ ತಿಳಿಸುತ್ತೇನೆ ಎಂದರು.ಇದೇ ವೇಳೆ ಬುಧವಾರ ಕಚೇರಿ ಓಪನ್ ಯಾಗಬೇಕು ಇಲ್ಲದಿದ್ದರೆ ಮತ್ತೆ ತಾಲ್ಲೂಕು ಪಂಚಾಯಿತಿಯ ಮುಂದೆ ಆಹೋರಾತ್ರಿ ಧರಣಿ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಮಾಧು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಂದರ್ ರಾಜ್, ದೇವರಾಜು, ಉಪಾಧ್ಯಕ್ಷ ದೊಡ್ಡಸ್ವಾಮಿ,ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version