ಮಂಡ್ಯ

ಪ್ರಗತಿ ಪರಿಶೀಲನಾ ಸಭೆಗೆ ತಡವಾಗಿ ಬಂದ ಶಾಸಕ..!

Published

on

ಮಳವಳ್ಳಿ: ಮಳವಳ್ಳಿ ಕ್ಷೇತ್ರ ಶಾಸಕರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಗೆ ಶಾಸಕರು ತಡವಾಗಿ ಬಂದ ಹಿನ್ನಲೆಯಲ್ಲಿ ಕೆಲವು ಅಧಿಕಾರಿಗಳು ಕಚೇರಿ ಕೆಲಸವನ್ನು ಬಿಟ್ಟು, ಸಭಾಗಣದಲ್ಲಿ ಕಾಲ ಕಳೆದ ಘಟನೆ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ತಾಲ್ಲೂಕು ಅಭಿವೃದ್ಧಿ ಬಗ್ಗೆ ಚರ್ಚಿಸಲು ಶಾಸಕ ಡಾ.ಕೆ.ಅನ್ನದಾನಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ 11 ಗಂಟೆಗೆ ತಾಲ್ಲೂಕು ಅಧಿಕಾರಿಗಳನ್ನು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದರು. 2 ಗಂಟೆಯಾದರೂ ಶಾಸಕರು ಬಾರದೆ ಇದ್ದು, ಕೆಲವರು ಅಧಿಕಾರಿಗಳ ಹೋದರೆ ಮತ್ತೆ ಕೆಲ ಅಧಿಕಾರಿ ಕಾದುಕುಳಿತರು. ಕೊನೆಗೆ ಮಧ್ಯಾಹ್ನ 2:30 ಗಂಟೆಗೆ ಶಾಸಕರು ಸಭಾಂಗಣದಲ್ಲಿ ಕಾಣಿಸಿಕೊಂಡರು. ಇನ್ನೂ ಇದೇ ವೇಳೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಮಾಧು, ಜಿ.ಪಂ ಸದಸ್ಯರುಗಳಾದ ಸುಷ್ಮಾರಾಜು, ಸುಜಾತ ಪುಟ್ಟು, ರವರು ಕೆಡಿಪಿ ಸಭೆಯನ್ನು 11 ಗಂಟೆಗೆ ಕರೆದಿದ್ದು, ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿರುವ ಬಗ್ಗೆ ನಮಗೆ ತಿಳಿಸಿಲ್ಲ, ನಮಗೆ ಏಕೆ ಸಭೆಗೆ ಆಹ್ವಾನದ ನೋಟಿಸ್ ನೀಡಿದ್ದಿರಿ, ಸಭೆಯನ್ನು ರದ್ದು ಮಾಡಿ ಎಂದು ತಾ.ಪಂ ಇಓ ಸತೀಸ್ ರನ್ನು ಒತ್ತಾಯಿಸಿದರು. ಈ ಮದ್ಯೆ ಶಾಸಕ ಡಾ.ಕೆ.ಅನ್ನದಾನಿ ರವರಿಗೂ ಜಿ.ಪಂ ಸದಸ್ಯೆ ಸುಷ್ಮಾ ರಾಜುರವರಿಗೂ ಮಾತಿನ ಚಕಮುಕಿ ನಡೆಯಿತು.ಕೆಡಿಪಿ ಸಭೆಗೆ ಅಡ್ಡಿಪಡಿಸಿದ್ದರೆ ಕ್ರಮಕೈಗೊಳ್ಳಿ, ಎಂದು ಶಾಸಕ ಡಾ.ಕೆ.ಅನ್ನದಾನಿ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಈ ಮದ್ಯೆ ಪೊಲೀಸರು ಸಭೆಗೆ ಪ್ರವೇಶಿಸಿದಾಗ ಹೊರಗಡೆ ಕಳುಹಿಸಿ ಇಲ್ಲವೇ ಕುರ್ಚಿಯಲ್ಲಿ ಕುಳಿತು ಕೊಳ್ಳುವುದಕ್ಕೆ ಹೇಳಿ. ಗುಂಡಾಗಿರಿಗೆ ನಾನು ಬಗ್ಗೋದಿಲ್ಲ ಎಂದು ಶಾಸಕರು ಸವಾಲು ಹಾಕಿದರು. ಕೊನೆಗೆ ತಾ.ಪಂ ಅಧ್ಯಕ್ಷ,ಉಪಾಧ್ಯಕ್ಷ ,ಜಿ.ಪಂ ಸದಸ್ಯರು ಸಭೆಯನ್ನು ಬಹಿಷ್ಕಾರ ಮಾಡಿದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version