ಕಲಬುರಗಿ

ಡಾ.ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ 2ನೇ ಸ್ಮರಣೋತ್ಸವ..!

Published

on

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಚದ ಪದಾಧಿಕಾರಿಗಳ ಸಭೆ ಹಾಗೂ ಡಾ.ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ 2ನೇ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಪ್ರದಾನ ಕಾರ್ಯದರ್ಶಿ ಜಿ.ಬಿ.ಪಾಟೀಲ , ಧುತ್ತರಗಾಂವದ ವಿಶ್ವನಾಥ ಕೋರಣೆಶ್ವರ ಸ್ವಾಮೀಜಿ, ಮಾತನಾಡಿ 2021ರ ಜನಗಣತಿಯಲ್ಲಿ ಲಿಂಗಾಯತ ಧರ್ಮೀಯರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸುವದು. ಗ್ರಾಮ ಮಟ್ಟದಲ್ಲಿ ಲಿಂಗಾಯತ ಮಹಾಸಭಾ ಘಟಕ ರಚಿಸಿ, ಸಂಘಟನೆ ಬಲಪಡೆಸುವದು.ಲಿಂಗಾಯತ ಮಹಾಸಭಾದ ಸದಸ್ಯತ್ವ ಹೆಚ್ಚಿಸುವದು.ಲಿಂಗಾಯತ ಧರ್ಮದ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಜನಜಾಗೃತಿ ಕಾರ್ಯ ಕೈಗೊಳ್ಳುವ ಕೆಲಸ.ಮಾಡಬೇಕು ಎಂದು ತಿಳಿಸಿದರು.ಜಿಲ್ಲಾ ಕಾರ್ಯದರ್ಶಿ ಆರ್.ಜಿ.ಶೇಟಗಾರ, ತಾಲ್ಲೂಕಾಧ್ಯಕ್ಷ ರಮೇಶ ಲೋಹಾರ, ಕುಪೇಂದ್ರ ಪಾಟೀಲ, ರವೀಂದ್ರ ಶಾಬಾದಿ, ಬಸವರಾಜ ಪವಾಡಶೆಟ್ಟಿ, ರಾಜಕುಮಾರ ಯಕಂಚಿ, ಬಾಬುರಾವ ಮಡ್ಡೆ, ಸಿದ್ದರಾಮ ಯಳವಂತಗಿ. ಅಪ್ಪಾಸಾಹೇಬ ತೀರ್ಥೆ ,ಸಂಜಯ ಪಾಟೀಲ, ಬಸವರಾಜ ಕೊರಳ್ಳಿ ಇದ್ದರು.ಕಲಬುರ್ಗಿ, ಆಳಂದ, ಜೇವರ್ಗಿ,ಅಫಜಲಪುರ, ಸೇಡಂ, ಶಹಾಬಾದ, ಕಮಲಾಪುರ ಹಾಗೂ ನೇರೆಯ ಲಾತೂರು, ಉಮರ್ಗಾ, ಅಕ್ಕಲಕೋಟ ತಾಲ್ಲೂಕಿನ ಬಸವಾಭಿಮಾನಿಗಳು ಹಾಗೂ ಮಹಾಸಭಾ ಪದಾಧಿಕಾರಿಗಳು ಭಾಗವಹಿಸಿದರು.
ವರದಿ- ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್. ಟಿವಿ. ಆಳಂದ

Click to comment

Trending

Exit mobile version