ಮಂಡ್ಯ

ಎ.ಬಿ.ಶಶಿಧರ್ ವರ್ಗಾವಣೆ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ..!

Published

on

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮ ಪಂಚಾಯತಿ ಅಧಿಕಾರಿ ಎ.ಬಿ.ಶಶಿಧರ್ ವರ್ಗಾವಣೆ ಕ್ರಮವನ್ನು ವಿರೋಧಿಸಿ ಹಲಗೂರು ಗ್ರಾಮದ ಸಾರ್ವಜನಿಕರು ಗ್ರಾಮ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮವನ್ನು ಭ್ರಷ್ಟಾಚಾರ ಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದ ದಕ್ಷ ಅಧಿಕಾರಿ ಎ.ಬಿ.ಶಶಿಧರ್ ರವರನ್ನು ಕೆಲ ಪಟ್ಟಬದ್ರ ಹಿತಾಸಕ್ತಿಗಳ ಕುತಂತ್ರದಿಂದ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಧಿಕ್ಕಾರ ಕೂಗಿದರು.ಶಶಿಧರ್ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ದಕ್ಷತೆಯಿಂದ ನೊಂದ ಸಾರ್ವಜನಿಕರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತೊಲಗಿಸಲು ಸಾರ್ವಜನಿಕರಿಗೆ ಕಚೇರಿಯಲ್ಲಿ ದೊರಕುವ ಸೇವೆಗಳು ಮತ್ತು ಅದಕ್ಕೆ ತಗಲುವ ಶುಲ್ಕವನ್ನು ಸೂಚನಾ ಫಲಕದಲ್ಲಿ ಅಳವಡಿಸುವ ಜೊತೆಗೆ ಕರಪತ್ರ ಹೊರಡಿಸಿ ಬೀದಿ ಬೀದಿಗಳಲ್ಲಿ ಸಾರ್ವಜನಿಕರಿಗೆ ಹಂಚಿ ಜಾಗೃತಿ ಮೂಡಿಸಿದ್ದಾರೆ. ಇದರ ಪರಿಣಾಮ ಯಾವುದೇ ಮದ್ಯವರ್ತಿಗಳಿಲ್ಲದೇ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿದಾರರು ಖುದ್ದಾಗಿ ಬಂದು ಇ-ಸ್ವತ್ತು ಸೇರಿದಂತೆ ಹಲವಾರು ಸಾರ್ವಜನಿಕ ಸೇವೆಗಳು ನಿಗದಿತ ಸಮಯದಲ್ಲಿ ಸರ್ಕಾರಿ ಶುಲ್ಕದಲ್ಲಿ ಸಿಗುವಂತಾಗಿದೆ. ಇಂತಹ ಪ್ರಮಾಣಿಕ ಅಧಿಕಾರಿ ಎ.ಬಿ.ಶಶಿಧರ್ ರವರನ್ನು ವರ್ಗಾವಣೆ ಮಾಡಿರುವುದು ದುರದೃಷ್ಟಕರ. ಪ್ರಮಾಣಿಕ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಶಿಕ್ಷೆಗೆ ಗುರಿ ಮಾಡಿದರೆ ಇತರೆ ಪ್ರಮಾಣಿಕ ಅಧಿಕಾರಿಗಳಿಗೂ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ದೂರಿದರು. ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎಸ್. ಸತೀಶ್ ರವರಿಗೆ ಕೂಡಲೇ ಶಶಿಧರ್ ರವರ ವರ್ಗಾವಣೆ ಹಿಂಪಡೆಯಬೇಕು. ಎಲ್ಲಾ ಮೇಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆಯನ್ನು ಜನತಾ ನ್ಯಾಯಾಲಯದಲ್ಲಿ ತೀರ್ಮಾನಿಸಬೇಕು. ವರ್ಗಾವಣೆ ರದ್ದು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ,ದೇವೆಗೌಡರು,ಶ್ರೀನಿವಾಸ್,ರವೀಶ್ಗೌಡ, ಅಶ್ವಥ್, ರವಿ ಮೋದಿ, ಸುರೇಂದ್ರ, ಪ್ರಭಾಕರ್, ಆನಂದ್, ಕಿರಣ್ ಕುಮಾರ್, ಬಸವರಾಜು,ಎಚ್.ಎನ್. ವೀರಭದ್ರಯ್ಯ, ಆನಂದ್ ಕುಮಾರ್, ಪುನೀತ್, ಉಮೇಶ್ ದಡಮಹಳ್ಳಿ, ಕನ್ನಡ ಗಿರೀಶ್ ಸೇರಿದಂತೆ ಹಲವರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version