Uncategorized

ರೈತಾಪಿ ವರ್ಗದ ಉಪ ಕಸಬು ಹೈನುಗಾರಿಕೆಯಾಗಿದೆ- ಎ ಟಿ ರಾಮಸ್ವಾಮಿ

Published

on

ಅರಕಲಗೂಡು : ಮನುಷ್ಯನ ಆಹಾರ ಪದ್ದತಿಯಲ್ಲಿ ಅತಿಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರ ಹಾಲು ಮತ್ತು ದೇಶದ ರೈತಾಪಿ ವರ್ಗದ ಉಪ ಕಸಬು ಹೈನುಗಾರಿಕೆಯಾಗಿದೆ ಎಂದು ಶಾಸಕ ಎ ಟಿ ರಾಮಸ್ವಾಮಿ ತಿಳಿಸಿದ್ದಾರೆ. ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಲು ಉತ್ಪಾದಕರ ಸಹಕಾರ ಸಂಘ ವತಿಯಿಂದ ಆಯೋಜಿಸಿದ ಉಚಿತ ಜಾನುವಾರು ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರತಳಿ ರಾಸುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಮಾನವನ ಆಹಾರ ಪದ್ದತಿಯಲ್ಲಿ ಅತಿ ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರ ಹಾಲು ಅದರಿಂದಲೇ ರೈತಾಪಿ ವರ್ಗದಲ್ಲಿ ಹಸು ಸಾಕುವಿಕೆಗೆ ಒತ್ತು ನೀಡುತ್ತಿದ್ದು. ಮತ್ತು ರೈತ ವ್ಯವಸಾಯಕ್ಕೆ ಉಪ ಕಸುಬು ಜೊತೆಗೆ ಆರ್ಥಿಕವಾಗಿ ರೈತರ ಬೆನ್ನೆಲುಬಾಗಿ ರಾಸುಗಳು ನಿಂತಿದೆ ಮತ್ತು ಹಸುಗಳಿಗೆ ಕಾಲುಬಾಯಿ ವೈರಸ್ ರೋಗ ಹರಡುತ್ತಿದ್ದು ಹಾಲು ಉತ್ಪಾದನೆ ಕಡಿಮೆ ಪ್ರಮಾಣವಾಗುತ್ತಿದ್ದು ರೈತರು ರಾಸುಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿ ಲಸಿಕೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ರಾಸುಗಳಿಗೆ ಹಾಕಿಸಬೇಕು ಒಂದು ಭಾರಿ ಲಸಿಕೆ ಹಾಕಿಸಿದರೆ ಆರು ತಿಂಗಳ ಕಾಲ ರೋಗ ನಿರೋಧಕ ಶಕ್ತಿ ರಾಸುಗಳಲ್ಲಿ ಇರುತ್ತದೆ ನಂತರ ಮತೆ ಲಸಿಕೆ ಹಾಕಿಸಬೇಕು ಎಂದರು.ಪ್ರಪಂಚದಲ್ಲಿ ಭಾರತದ ದೇಶ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿ ಇದೆ ಹಾಗೂ ಹಸು ಸಾಕಣಿಯಲ್ಲಿ ರಾಜ್ಯದಲ್ಲಿ ಹಾಸನ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದೆ.ಅತಿಹೆಚ್ಚು ಮಿಶ್ರತಳಿ ಇರುವುದು ಹಾಸನ ಜಿಲ್ಲೆಯಲ್ಲಿದೆ ಹಾಲು ಉತ್ಪಾದನೆಯಿಂದ ರೈತರ ಆರ್ಥಿಕ ಸ್ಥಿರತೆ ಕಾಪಾಡುವ ಜೊತೆಗೆ ಮನುಷ್ಯ ದೇಹಕ್ಕೆ ಪೌಷ್ಠಿಕಾಂಶವನ್ನು ನೀಡುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಡಾ. ದೀಲಿಪ್ ಮತ್ತು ಗ್ರಾಮಸ್ಥರ ಹಾಜರಾಗಿದ್ದರು.

ವರದಿ- ಎ.ಎನ್ ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು

Click to comment

Trending

Exit mobile version