ಹುಬ್ಬಳ್ಳಿ-ಧಾರವಾಡ

ಕೋರೊನಾ ವಾರಿಯಾರ್ಸ್ ನಿಂದ ಕೊರೊನಾ ಜಾಗೃತಿ ಅಭಿಯಾನ..!

Published

on

ಹುಬ್ಬಳ್ಳಿ: ಹುಬ್ಬಳ್ಳಿಯ ಘಂಟಿಕೇರಿ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿಗಳು ಘಂಟಿಕೇರಿ ಓಣಿ, ವೀರಾಪುರ ಓಣಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋರೋನಾ ಜಾಗೃತಿ ಮೂಡಿಸುತ್ತಿದ್ದು, ಕೋರೋನಾ ವೈರಸ್ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು ಪ್ರಾಣ ಹಾನಿ ಸಂಭವವಿದೆ ಆದ ಕಾರಣ ಸಾರ್ವಜನಿಕರು, ಯುವಕರು ಜಾಗೃತರಾಗಿರಬೇಕು. ಕೋವೀಡ್-19 ಪರೀಕ್ಷೆ ಮಾಡಿಸಿಕೂಂಡು ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು ಕೋವಿಡ್ ಸಮಯದಲ್ಲಿ ಪ್ರತಿಯೂಬ್ಬರು ಮಾಸ್ಕ್ ಧರಿಸುದರ ಮೂಲಕ ಸಾಮಾಜಿಕ ಅಂತರ ಕಾಯ್ದುಕೂಳ್ಳಬೇಕು, ಇನ್ನೂ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿ ಹೇಳಿ ಉಚಿತ ಮಾಸ್ಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಎಎಸ್ ಐ ಎನ್.ಬಿ.ಬೆಲ್ಲದ್, ಎನ್.ಬಿ.ಮೇದೂರ, ಎ.ಎನ್.ಚೌರೆಡ್ಡಿ, ಎಫ್.ಎನ್.ಚಿಕ್ಕನಗೌಡ್ರ, ವಿ.ಆರ್.ಮಾದರ, ಎಸ್.ಎಸ್.ಹಡಗಿನಾಳ ಸೇರಿದಂತೆ ಮುಂತಾದವರು ಇದ್ದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version