Uncategorized

ಮೂಲಭೂತ ಸೌಲಭ್ಯ ಒದಗಿಸಿ ಕೊಟ್ಟು ರಸ್ತೆ ಕಾಮಗಾರಿ ಮಾಡಿ..

Published

on

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-13 ರಲ್ಲಿ ಅಂಡರ್ ಪಾಸ್ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಗ್ರಾಮದ ಎಡಭಾಗದಲ್ಲಿ ಶಾಲೆ, ದೇವಾಲಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಪಶು ಆಸ್ಪತ್ರೆ ಇದೆ. ಆದರೆ ಬಹುತೇಕ ಗ್ರಾಮದ ಜನರು ಬಲಭಾಗದಲ್ಲಿದ್ದಾರೆ. ಆದರೆ ಶಾಲಾ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಗಳಿಗೆ ಸುಮಾರು ೭ ನೂರು ಮೀಟರ್ ಹೋಗಿ ರಸ್ತೆ ದಾಟುವುದು ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುವ ಲಕ್ಷಣಗಳಿವೆ. ಆದ್ದರಿಂದ ಕೂಡಲೇ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಿ ರಸ್ತೆ ಪಕ್ಕದಲ್ಲಿರುವ ಜನರ ಹಾನಿಗೆ ಪರಿಹಾರದ ಜೊತೆಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಬಿ.ಡಿ.ಪಾಟೀಲ್ ಬಳ್ಳೊಳ್ಳಿ ಉಪತಹಶಿಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ.ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೇನೂರ.ಇಕ್ಬಾಲ ಪಠಾಣ .ಮುಬಾರಕ ಪಠಾಣ,ಎಮ್.ಎಚ್.ಉಮರಾಣಿ.ಮಲ್ಲು ಹೂಗಾರ.ಮಹೇಶ ಬುಕ್ಕಿ, ಬಸಗೂಂಡ ಪಾಟೀಲ,ಹುಸ್ಮಾನ ಪಠಾಣ,ನಿಂಬಣ್ಣಾ ಶಿರಶ್ಯಾಡ ರವಿ ಶಿಂದೆ ಮುಂತಾದವರು ಉಪಸ್ಥಿತರಿದ್ದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Click to comment

Trending

Exit mobile version