ಮಂಡ್ಯ

ಸಾಮಾಜಿಕ ಅಂತರ ಮರೆತು ಆಹಾರಕಿಟ್ ಪಡೆಯಲು ಮುಗಿಬಿದ್ದ ಕಾರ್ಮಿಕರು..!

Published

on

ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಶಾಸಕರು ಮನವಿಕೊಂಡರೂ ಮಾತಿಗೆ ಮಾನ್ಯತೆ ನೀಡದ ಸಾರ್ವಜನಿಕರು ಆಹಾರ ಕಿಟ್ ಪಡೆಯಲು ಮುಗಿ ಬಿದ್ದ ಪ್ರಸಂಗ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು. ಮಳವಳ್ಳಿ ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆವತಿಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶಾಸಕ ಡಾ.ಕೆ ಅನ್ನದಾನಿ ರವರು ಮಾತನಾಡಿ, ಕೋವಿಡ್ ಮಹಾಮಾರಿ ಬಂದಾಗ ನಮ್ಮ ಭಾಗದಲ್ಲಿ ಕಟ್ಟಡ ಕಾರ್ಮಿಕರು ಹೆಚ್ಚಾಗಿದ್ದಾರೆ. ಅವರಿಗೆ ಆಹಾರ ಕಿಟ್ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ ಆದರೆ ಈಗ ನೀಡಿದ್ದಾರೆ ಎಂದರು. ಇನ್ನೂ ಕಾರ್ಯಕ್ರಮ ದಲ್ಲಿ 1000 ಮಂದಿ ಕಟ್ಟಡ ಕಾರ್ಮಿಕ ರಿಗೆ ಹಂಚುವ ವ್ಯವಸ್ಥೆ ಮಾಡಿದ್ದರು. ಆದರೆ 2000 ಕ್ಕೂ ಮಂದಿ ಫಲಾನುಭವಿಗಳ ಆಗಮಿಸಿದ್ದು ಗೊಂದಲದ ಗೂಡಾಗಿ ಪರಿಣಮಿಸಿತು. ಆಹಾರಕಿಟ್ ಪಡೆಯಲು ನಾ ಮುಂದು ಅಂತ ಒಬ್ಬರನ್ನು ತಳ್ಳಾಟ ನೂಕಾಟ ನಡೆಯಿತು.ಒಟ್ಟಿನಲ್ಲಿ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಅವ್ಯವಸ್ಥೆ ತಾಣವಾಗಿದ್ದು, ಪೊಲೀಸರು ಸಾರ್ವಜನಿಕರನ್ನು ಹತೋಟಿಗೆ ತರಲು ಪರದಾಡುವಂತಾಯಿತು. ಇನ್ನೂ ಇದೇ ವೇಳೆ ನಿಜವಾದ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ಸಿಕ್ಕಿಲ್ಲ ಎಂದು ಕಟ್ಟಡ ಕಾರ್ಮಿಕ ಸಂಘದ ಪ್ರಧಾನಕಾರ್ಯದರ್ಶಿ ತಿಮ್ಮೇಗೌಡ ಆರೋಪಿಸಿದರು.ಕಿಟ್ ವಿತರಣೆಯಲ್ಲೂ ರಾಜಕೀಯ ಬೇರಸಿದ್ದು ಆಹಾರ ಕಿಟ್ ವಿತರಣೆಯಾಗುವವರೆಗೂ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version