Uncategorized

ಸಾರ್ವಜನಿಕ ಗಾರ್ಡನ್ ಜಾಗದಲ್ಲಿ’ ಖಾಸಗಿ ಕಟ್ಟಡ ನಿರ್ಮಾಣದ ಆರೋಪ..!

Published

on

ಹುಬ್ಬಳ್ಳಿ- ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಪ್ರತಿಯೊಂದು ನಗರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾರ್ಕ್ ನ್ನು ನಿರ್ಮಿಸಬೇಕೆಂದು ಆದೇಶ ಇದೆ. ಆದರೆ ಈ ನಗರದಲ್ಲಿ ಪಾರ್ಕ್ ಗೆ ಬಿಟ್ಟ ಸ್ಥಳವನ್ನು ಕಾಣದ ಕೈಗಳ ಜೊತೆ ಸೇರಿಕೊಂಡ ಅಧಿಕಾರಿಗಳು ಖಾಸಗಿ ಕಟ್ಟುತ್ತಿರುವ ಆರೋಪ ಕೇಳಿ ಬಂದಿದೆ. ಗಾರ್ಡನ್ ಗೆ ಅಂತ ಬಿಟ್ಟಿದ್ದ ಸ್ಥಳವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆಗುತ್ತಿರುವ ಸ್ಥಳಿಯ ನಿವಾಸಿಗಳು ಇಂತಹ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ವಾರ್ಡ್ ನಂ 48 ಕೇಶ್ವಾಪೂರದ ನವಿನ ಪಾರ್ಕ್ ದಲ್ಲಿ. ಸುಪ್ರೀಂ ಕೋರ್ಟ್ ಆದೇಶದಂತೆ ವಾರ್ಡ್ ಪ್ರಕಾರ ಗಾರ್ಡನ್ ನಿರ್ಮಾಣ ಮಾಡಬೇಕು ಎಂದು ಆದೇಶವಿದೆ. ಈ ನಕ್ಷೆಯಲ್ಲಿ ತೋರಿಸುತ್ತಿರುವ ಪ್ರಕಾರ ಈ ಸ್ಥಳ ಇಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಪಾರ್ಕ್ ಮಾಡಲು ಅನುಮತಿಯನ್ನು ನೀಡಿತ್ತು. ಆದರೆ ಅಧಿಕಾರಿಗಳು ಕಾಣದ ಕೈ ಗಳ ಜೊತೆ ಸೇರಿಕೊಂಡು ಪಾರ್ಕ್ ಗೆ ಸೀಮಿತವಾದ ಸ್ಥಳದಲ್ಲೇ ಕಮರ್ಷಿಯಲ್ ಕಟ್ಟಡ ಕಟ್ಟಲು, ಅನುಮತಿ ನೀಡಿರುವ ಆರೋಪ ಕೇಳಿ ಬಂದಿದೆ. ಇನ್ನು ಈ ಜಾಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಪಿಲ್ಲರ್ ಗಳನ್ನು ಹಾಕಿದ್ದು ದೊಡ್ಡ ಪ್ರಮಾಣದ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗಿದೆ.ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೆಜವಾಬ್ದಾರಿತನದಿಂದ ಇಂತ ಘಟನೆ ನಡೆದಿದ್ದ ಕೂಡಲೇ ಗಾರ್ಡನ್ ಜಾಗವನ್ನು ಒತ್ತುವರಿ ತೆರುವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಒತ್ತುವರಿ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕಾರ ಅಗಸ್ಟ್ 25 1997 ರಲ್ಲಿ. ಈ ಸ್ಥಳದಲ್ಲೇ ಗಾರ್ಡನ್ ಮಾಡಲು ಸುಮಾರು 40 ಗುಂಟೆ ಜಾಗವನ್ನು ಕಾಯ್ದಿರಿಸಲು ಆದೇಶ ಹೊರಡಿಸಲಾಗಿದೆಯಂತೆ, ಆದರೆ ಈಗ 22 ಗುಂಟೆ ಜಾಗದಲ್ಲಿ ಕಮರ್ಷಿಯಲ್ ಕಟ್ಟಡ ಕಟ್ಟಲು ಆರಂಭಿಸಿದ್ದಾರೆ. ಇದನ್ನು ತಕ್ಷಣ ಬಂದ ಮಾಡಿ ಗಾರ್ಡನ್ ಮಾಡಬೇಕೆಂದು ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಇಲ್ಲಿನ ಸುತ್ತಮುತ್ತಲಿನ ಜನರು ಬೆಳಿಗ್ಗೆ ವಾಯುವಿಹಾರಕ್ಕೆಂದು ಮುಖ್ಯ ರಸ್ತೆಯಲ್ಲಿ ಹೋಗುವುದು ಅನಿವಾರ್ಯವಾಗಿದೆ. ಆದರೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಾರ್ಡನ್ ಮಾಡಲು ಇದ್ದ ಜಾಗ ಈಗ. ಕಮರ್ಷಿಯಲ್ ಬಿಲ್ಡಿಂಗ್ ಮಾಡಲು ಮುಂದಾಗಿರುವವರ ವಿರುದ್ಧ ಸ್ಥಳಿಯರು ಕಿಡಿ ಕಾರಿದ್ದಾರೆ.ಅಷ್ಟೇ ಅಲ್ಲದೆ ಸುಮಾರು ತಿಂಗಳಿನಿಂದ ಕಾಮಗಾರಿ ನಡೆಸುತ್ತಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಸ್ಥಳಿಯರು ಕೇಳಿದ್ರೆ ಇದರ ಬಗ್ಗೆ ಮಾಹಿತಿ ಇಲ್ಲವೆಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಆದಷ್ಟು ಬೇಗ ಹು-ಧಾ ಮಹನಾಗರ ಪಾಲಿಕೆ ಆಯುಕ್ತರು ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿ’ ಗಾರ್ಡನ್ ನಿರ್ಮಿಸಿ ಒತ್ತುವರಿಯಾಗಿರುವ ಜಾಗವನ್ನು ತೆರುವುಗೊಳಿಸಬೇಕು,ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಕೋಟ್ಯಾಂತರ ರೂ. ಬೆಲೆವಿರುಬ ಸಾರ್ವಜನಿಕ ಆಸ್ತಿಯನ್ನು ಕಾಣದ ಕೈಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದರು ಕೂಡ, ಮಹಾನಗರ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು, ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ವರದಿ-ರಾಜು ಮುದಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version