ಮೈಸೂರು

ಪಿರಿಯಾಪಟ್ಟಣದ ಸ್ಥಳೀಯ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ..!

Published

on

ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಸ್ಥಳೀಯ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿದಿದ್ದು ಅಧ್ಯಕ್ಷರಾಗಿ ಮಂಜುನಾಥ್ ಸಿಂಗ್, ಉಪಾಧ್ಯಕ್ಷರಾಗಿ ನಾಗರತ್ನ ಉಮೇಶ್ ಆಯ್ಕೆಯಾದರು. ಸತತ 2 ವರ್ಷಗಳಿಂದ ಅಧಿಕಾರ ಇಲ್ಲದೆ ಕೇವಲ ಸದಸ್ಯರಾಗಿ ಪರಿತಪಿಸುತ್ತಿದ್ದ ಪುರಸಭಾ ಅಧ್ಯಕ್ಷ ,ಉಪಾಧ್ಯಕ್ಷರ ಸೀಟಿಗೆ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪಿನಂತೆ ಚುನಾವಣೆ ನಡೆಸಲಾಯಿತು.ಅಧ್ಯಕ್ಷ ಸ್ಥಾನ ಬಿಸಿಎಂಎ ಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಸಿಂಗ್ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಉಮೇಶ್ ,ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಅರ್ಷದ್, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಚನ್ನಬಸವರಾಜ್ ನಾಮಪತ್ರ ಸಲ್ಲಿಸಿದರು.ಪುರಸಭೆಯಲ್ಲಿ ಒಟ್ಟು 23 ಮಂದಿ ಸದಸ್ಯರ ಬಲದ ಪುರಸಭೆಗೆ, ಕಾಂಗ್ರೆಸ್ ನ 8 ಸದಸ್ಯರು, ಒಬ್ಬ ಸ್ವತಂತ್ರ ಅಭ್ಯರ್ಥಿ, 14 ಮಂದಿ ಜೆಡಿಎಸ್ ಸದಸ್ಯರು ಶಾಸಕ ಕೆ ಮಹದೇವ್ ಸೇರಿದಂತೆ 24 ಮಂದಿ ಮತದಾನ ಮಾಡಿದರು. 16 ಮಂದಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪರವಾಗಿ ಮತ ಚಲಾಯಿಸಿ ಮಂಜುನಾಥ್ ಸಿಂಗ್ ಅಧ್ಯಕ್ಷರಾಗಿ ನಾಗರತ್ನ ಉಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರೆ.ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ 8 ಮತಗಳು ಚಲಾವಣೆಗೊಂಡು ಪರಾಭವಗೊಂಡರು ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಶ್ವೇತಾ ರವೀಂದ್ರ ಕಾರ್ಯನಿರ್ವಹಿಸಿದರು.ಇನ್ನೂ ನೂತನ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಪಟ್ಟಣದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು .ಕಳೆದ ಹಲವಾರು ವರ್ಷಗಳಿಂದ ನಿವೇಶನ ಇಲ್ಲದ ನಿರಾಶ್ರಿತರಿಗೆ ನಿವೇಶನ ಕಲ್ಪಿಸಿಕೊಡಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು

ವರದಿ-ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Click to comment

Trending

Exit mobile version