Uncategorized

ನಾನು ಫಿಟ್ ಆಗಿದ್ದೇನೆ ಅಂತಿದ್ದಾರೆ ಕಪಿಲ್ ದೇವ್..!

Published

on

ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸಗೆ ಒಳಗಾಗಿದ್ದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಇದೀಗ ಫುಲ್ ಆಕ್ಟಿವ್ ಆಗಿದ್ದು ಅಭಿಮಾನಿಗಳು ಖುಶ್ ಆಗಿದ್ದಾರೆ.61 ವರ್ಷದ ಕಪಿಲ್ ದೇವ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು ಗಾಲ್ಫ್ ಕ್ರೀಡೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಟ್ವಿಟರ್ಲ್ಲಿ ತಮ್ಮ ಗಾಲ್ಫ್ ಆಟದ ವಿಡಿಯೋ ಪೋಸ್ಟ್ ಮಾಡಿರುವ ಕ್ರಿಕೆಟ್ ದಂತಕತೆ, ಗಾಲ್ಫ್ ಆಟ ಆಡೋದೇ ನನಗೆ ಮಜಾ ಅಂತಾ ಬರೆದುಕೊಂಡಿದ್ದಾರೆ. ಕಪಿಲ್ ದೇವ್ ಇಷ್ಟರಮಟ್ಟಿಗೆ ಚೇತರಿಸಿಕೊಂಡಿದ್ದನ್ನ ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version