Uncategorized

ಸಂವಿದಾನ ಜಾರಿಯಾಗಿ 70 ವರ್ಷ ಕಳೆದರೂ ಸಂವಿಧಾನ ಜಾರಿಯಾಗಿಲ್ಲ- ಡಾ.ಕೆ ಅನ್ನದಾನಿ..!

Published

on

ಸಂವಿದಾನ ಜಾರಿಯಾಗಿ 70 ವರ್ಷ ಕಳೆದರೂ ಸಂವಿದಾನವೂ ಯಥವತ್ತಾಗಿ ಜಾರಿಯಾಗದೆ ಇರುವುದು ಬೇಸರ ಸಂಗತಿ ಎಂದು ಶಾಸಕ ಡಾ.ಕೆ ಅನ್ನದಾನಿ ವಿಷಾದ ವ್ಯಕ್ತಪಡಿಸಿದರು. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪುರಸಭಾ ಕಾರ್ಯಾಲಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಕೆ ಅನ್ನದಾನಿ ಪೌರಕಾರ್ಮಿಕರು ಹಾಗೂ ಅವರ ಮಕ್ಕಳು ಕಸ ಗುಡಿಸುವ ಕೆಲಸ ಮಾಡಬೇಕು, ಅಚಾರಿಗಳು ಅಯಾ ಕೆಲಸವನ್ನು ಮಾಡಬೇಕು ಎಂಬ ಪದ್ದತಿ ಬದಲಾಗಬೇಕು ಎಂದರು. ಸಂವಿಧಾನದಲ್ಲಿ ಹಕ್ಕುಗಳು ಇನ್ನೂ ಹಕ್ಕುಗಳಾಗಯೇ ಉಳಿದಿರುವುದು ಬೇಸರ ಸಂಗತಿ ಎಂದರು. ಇನ್ನೂ ಇದೇ ವೇಳೆ ಕೋರೋನಾ ವಾರಿಯಸ್೯ಯಾಗಿ ಕೆಲಸ ನಿರ್ವಹಿಸಿದ್ದ ಪೌರಕಾರ್ಮಿರಿಗೆ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ.ಪುರಸಭೆಯಿಂದ ಪೌರಕಾರ್ಮಿಕರು ನಗರಿ ಬಾರಿಸುವ ಮೂಲಕ ಪಟ್ಟಣದ ಪ್ರಮುಖಬೀದಿಗಳ ಮೂಲಕ ಅಂಬೇಡ್ಕರ್ ಭವನದವರೆಗೂ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾದ್ಯಕ್ಷೆ ರಾಧನಾಗರಾಜು, ಉಪಾಧ್ಯಕ್ಷ ನಂದಕುಮಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪುರಸಭಾ ಮುಖ್ಯಾಧಿಕಾರಿ ಗಂಗಾಧರ್, ಸೇರಿದಂತೆ ಪುರಸಭಾ ಸದಸ್ಯರುಗಳು ಹಾಜರಿದ್ದರು

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version