ಮಂಡ್ಯ

ರಾಜೀವ್ ಗಾಂಧಿ ಸೇವಾ ಕೇಂದ್ರ ಮರು ಉದ್ಘಾಟನೆ..

Published

on

ಮಳವಳ್ಳಿ: ಉದ್ಘಾಟನೆಯಾಗಿದ್ದ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರ ಪ್ರತಿಭಟನೆ ನಡುವೆಯೂ ಪೊಲೀಸರ ಸರ್ಪಗಾವಲಿನಲ್ಲಿ ಶಾಸಕರು ಮರು ಉದ್ಘಾಟನೆ ಮಾಡಿದ ಪ್ರಸಂಗ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮದಲ್ಲಿ ನಡೆಯಿತು. ಬಳಿಕ ಡಾ.ಕೆ ಅನ್ನದಾನಿ ರವರು ಮಾತನಾಡಿ, ಈ ಹಿಂದೆ ಉದ್ಘಾಟನೆಯಾಗಿದ್ದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ,ಈಗ ಅಧಿಕೃತವಾಗಿ ಉದ್ಘಾಟನೆ ಮಾಡುತ್ತಿದ್ದೇನೆ ಎಂದರು. ಇನ್ನೂ ಇದೇ ವೇಳೆ ಮಾಜಿ ಶಾಸಕರ ವಿರುದ್ದ ವಾಗ್ಧಳಿಗಳ ಸರಮಾಲೆಯನ್ನೇ ಶಾಸಕ ಡಾ.ಕೆ ಅನ್ನದಾನಿ ಸುರಿದರು. ಕಳೆದ ಬಾರಿ ಮೋಸದಿಂದ 459 ಮತಗಳ ಅಂತರ ಗೆದ್ದರು. ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆ ನೆಲೆಯೇ ಇಲ್ಲ ಎಂದರು.ಇನ್ನೂ 2023 ರ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ,ಎಂದು ಶಾಸಕ ಅನ್ಮದಾನಿ ಮಾಜಿ ಸಚಿವರಿಗೆ ಸವಾಲು ಎಸೆದರು. ಇನ್ನೂ ಒಬ್ಬ ಸಚಿವರಾಗಿದ್ದವರು ಕೇವಲ ಸೊಸೈಟಿ ಚುನಾವಣೆ ನಿಂತು ಗೆದ್ದಿದ್ದಾರೆ.ಮುಂದಿನ ದಿನಗಳಲ್ಲಿ ಜಿ.ಪಂ.ಗ್ರಾ.ಪಂ ಚುನಾವಣೆ ನಿಂತು ಅಧ್ಯಕ್ಷರಾಗಿ ಎಂದು ವ್ಯಂಗ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತ, ತಾ.ಪಂ ಇಓ ಸತೀಶ್, ಆಡಳಿತಾಧಿಕಾರಿ ದೀಪು, ತಾ.ಪಂ ಸದಸ್ಯ ರಾಜಣ್ಣ ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version