Uncategorized

ಮಳೆತಂದ ಅವಾಂತರ ರೈತ ಕಂಗಾಲು..!

Published

on

ಶ್ರೀನಿವಾಸಪುರ : ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಒಂದಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ಈ ವರ್ಷ ಉತ್ತಮ ಮಳೆಯಾಗಿದ್ದು ಕೆಲ ಕೆರೆಗಳು ತುಂಬಿ ಕೊಡಿ ಹೋಗಿದ್ದವು. ಈ ವರ್ಷ ಉತ್ತಮವಾಗಿ ಮಳೆಯಾದ ಕಾರಣದಿಂದ ಎಲ್ಲಾ ಬೆಳೆಗಳು ಉತ್ತಮವಾಗಿ ಬೆಳೆಗಳಾಗಿದ್ದವು. ಆದ್ರೆ ಈಗ ಮಳೆರಾಯನ ಆರ್ಭಟದಿಂದ ಉತ್ತಮವಾಗಿ ಬೆಳೆಗಳಾಗಿದ್ದ ಬೆಳೆಗಳು ರಾಗಿ,ಜೋಳ ನೆಲಕ್ಕಚಿವೆ. ಸುಧೀರ್ಗವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮ್ಯಾಟೋ ಗೆ ಹಂಗಮಾರಿ ಅನ್ನೋ ರೋಗದಿಂದ ಸಂಪೂರ್ಣವಾಗಿ ಸುಟ್ಟು ಹೋದಂತೆ ಟೊಮ್ಯಾಟೋ ಗಿಡಗಳು ಬಾಡಿಹೋಗುತ್ತಿವೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚಾಗಿ ಟೊಮ್ಯಾಟೋ ಬೆಳೆಯುತ್ತಾರೆ ಆದರೆ ನೂರಾರು ಎಕರೆಯಲ್ಲಿ ಬೆಳೆದಿದಂತಹ ಬೆಳೆಗಳು ಹಾಳಾಗಿ ರೈತರು ಕಂಗಾಳಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು ಇಂದೂ ಮೋಡ ಮುಸುಕಿದ ವಾತಾವರಣ ಇದ್ದು ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಿದೆ ತಾಲ್ಲೂಕಿನ ಹಲವೆಡೆ ತುಂತುರು ಮಳೆಯಾದರೆ ಕೆಲವೆಡೆ ಜೋರು ಮಳೆಯಾಗುತ್ತಿದೆ ಇದು ರೈತರಲ್ಲಿ ಸಂತಸ ಮತ್ತು ನಿರಾಶೆ ಎರಡಕ್ಕೂ ಕಾರಣವಾಗಿದೆ ಇನ್ನೂ ಟೊಮೆಟೊ, ಜೋಳ ಹಾಗೂ ರಾಗಿ ಸೇರಿದಂತೆ ಹಲವು ಬೆಳೆಗಳಿಗೆ ಮಳೆಯಿಂದ ಸಂಪೂರ್ಣ ನಾಶವಾಗುತ್ತಿವೆ .

ವರದಿ : ರಾಮ್ ಚರಣ್ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Click to comment

Trending

Exit mobile version