ತಿಪಟೂರು

ರಾಮ್ ಮೋಹನ್ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ..!

Published

on

ತಿಪಟೂರು: ತಿಪಟೂರು ನಗರಸಭೆಯ ಪ್ರಥಮ ಸಾಮಾನ್ಯ ಸಭೆಯು ರಾಮ್ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ೨ವರ್ಷದಿಂದಲೂ ನಗರಸಭೆಯಲ್ಲಿ ಜನಪ್ರತಿ ಗಳಿಲ್ಲದೆ ಹಲವಾರು ಸಮಸ್ಯೆಗಳು ನಗರಸಭೆಯಲ್ಲಿ ಇವೆ ಆ ಸಮಸ್ಯೆಗಳನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಇ ಖಾತಾ ಗೆ ಹಣ ವಸೂಲಿ ಆರೋಪ. ಇ ಖಾತಾ ಮಾಡಲು ನಗರಸಭೆಯಲ್ಲಿ ಮಧ್ಯವರ್ತಿಗಳ ಮುಖಾಂತರ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನಗರಸಭಾ ಸದಸ್ಯರಾದ ಶ್ರೀನಿವಾಸ್ ಆರೋಪ ಮಾಡಿದರು.ಇದಕ್ಕೆ ಉತ್ತರಿಸಿದ ನಗರಸಭಾ ಪೌರಾಯುಕ್ತ ಉಮಾಕಾಂತ್ ಅವರು ತಾವು ಇಲ್ಲಿವರೆಗೆ ಇಲ್ಲಿಗೆ ಬಂದ ನಂತರ ಸುಮಾರು 300 ಖಾತೆಗಳನ್ನು ಮಾಡಿದ್ದೇನೆ ಯಾವುದೇ ಹಣ ವಸೂಲಿ ಮಾಡಿಲ್ಲ ಹಿಂದೆ ಇದ್ದವರ ಲೆಕ್ಕ ನನಗೆ ಗೊತ್ತಿಲ್ಲ ಖುದ್ದಾಗಿ ತಾವೇ ಖಾತಾದಾರರಿಗೆ ವಿತರಿಸಿದ್ದು ಯಾವುದೇ ಮಧ್ಯವರ್ತಿಗಳನ್ನು ಬಿಟ್ಟು ಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಗರದ ಎಲ್ಲಾ ವಾರ್ಡ್ ಗಳಲ್ಲಿ ಅದರಲ್ಲೂ ಗಾಂಧಿನಗರದ ಭಾಗದಲ್ಲಂತೂ ಯುಜಿಡಿ ಸಮಸ್ಯೆ ಹೇಳತೀರದಾಗಿದೆ ಯುಜಿಡಿ ಮಾಡಲು ಹೋಗಿ ಕುಡಿಯಲು ನೀರಿಲ್ಲದಂತೆ ಮಾಡಿದ್ದಾರೆ ಪೈಪ್ ಲೈನ್ ಸಂಪೂರ್ಣ ಹಾಳಾಗಿದ್ದು ಟ್ಯಾಂಕರ್ ನೀರು ತೆಗೆದುಕೊಂಡು ಬರಲು ರಸ್ತೆಗಳು ಸಂಪೂರ್ಣ ಹಾಳಾಗಿದೆ ಎಂದು ನಗರಸಭೆ ಸದಸ್ಯ ಕೋಟೆ ಪ್ರಭು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಅಜೆಂಡಾ ಸರಿಯಿಲ್ಲ ಸಭೆಯನ್ನು ಮುಂದಕ್ಕೆ ಹಾಕಿ ಎಂದು ಮಾಜಿ ಅಧ್ಯಕ್ಷ ಪ್ರಕಾಶ್ ಯೋಗೀಶ್ ಶ್ರೀನಿವಾಸ್ ಯೋಗೀಶ್ ಪ್ರಭು ಪಟ್ಟುಹಿಡಿದರು. ಇದಕ್ಕೆ ಸಮಜಾಯಿಸಿ ನೀಡಿದ ಪೌರಾಯುಕ್ತರು ಕ್ಷಮೆ ಕೇಳಿ ಸಭೆಯನ್ನು ಮುಂದುವರಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಗಣೇಶ್ ಮತ್ತು ನಗರದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ವರದಿ- ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version