ಮಂಡ್ಯ

ಡ್ರಾಪ್ ಕೊಡುವ ನೆಪದಲ್ಲಿ ಕಳ್ಳರ ಕೈಚಳಕ- ಕಿರುಗಾವಲು ಪೋಲಿಸರಿಂದ ಕಳ್ಳರ ಬಂಧನ..!

Published

on

ಮಳವಳ್ಳಿ; ಡ್ರಾಫ್ ಕೊಡುವ ನೆಪದಲ್ಲಿ ಮಹಿಳೆಯೊಬ್ಬ ಪರ್ಸು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಕಿರುಗಾವಲು ಪೊಲೀಸರು ಯಶ್ವಸಿಯಾಗಿದ್ದಾರೆ. ಮಳವಳ್ಳಿ ಪಟ್ಟಣವಾಸಿ ಅರುಣ್ ಹಾಗೂ ಮನ್ಸೂರ್ ಬಂಧಿತ ಆರೋಪಿಗಳಾಗಿದ್ದು. ಕಳೆದ ಒಂದು ವರ್ಷದ ಹಿಂದೆ ರಾತ್ರಿಯ ವೇಳೆ ನಿಂತ ಮಹಿಳೆಯೊಳ್ಳನ್ನು ಕಿರುಗಾವಲುಗೆ ಡ್ರಾಫ್ ಕೊಡುವುದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಮಾರ್ಕಾಲು ಗೇಟ್ ನಿಲ್ಲಿಸಿ ಮಹಿಳೆಯ ಬಳಿ ಇದ್ದ ಫರ್ಸು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.ಇನ್ನೂ ಫರ್ಸು ಹಾಗೂ ಮೊಬೈಲ್ ಕಳೆದುಕೊಂಡ ಮಹಿಳೆ ನಸೀನ್ ತಾಜ್ ರವರು ಕಿರುಗಾವಲು ಪೊಲೀಸ್ ಠಾಣೆ ದೂರು ನೀಡದ ಹಿನ್ನಲೆಯಲ್ಲಿ ಮಳವಳ್ಳಿ ಡಿವೈಎಸ್ ಪಿ ಪೃಥ್ವಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಹನುಮಂತಕುಮಾರ್ ಮತ್ತು ಮಲ್ಲಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳು ಕನಕಪುರ ತಾಲ್ಲೂಕಿನ ಸಾತನೂರು ಗ್ರಾಮದ ಬಳಿ ಇರುವ ಸುಳಿವು ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇನ್ನೂ ಆರೋಪಿ ಅರುಣ್ ಹಾಗೂ ಮನ್ಸೂರ್ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಲಾಗಿದೆ.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version