ಹುಬ್ಬಳ್ಳಿ-ಧಾರವಾಡ

ಕಾಲೇಜಿಗೆ ಹಾಜರಾದ ವಿಧ್ಯಾರ್ಥಿಗಳು! ಬಸ್ ಪಾಸ್ ನೀಡುವಂತೆ ಒತ್ತಾಯ..!

Published

on

ಹುಬ್ಬಳ್ಳಿ :-ಕೊರೊನಾ ಹಾವಳಿಯಂದ ಕಳೆದ ೭ ತಿಂಗಳಿನಿಂದ ಬಂದ್ ಆಗಿದ್ದ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾಲೇಜುಕ್ವಿಟ್ ಆರಂಭಕ್ಕೆ ರಾಜ್ಯ ಸರಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಾಲೇಜುಗಳು ಆರಂಭಗೊಂಡಿದ್ದು ಹಂತಹಂತವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುತ್ತಿದ್ದಾರೆ. ದೇಶದಲ್ಲಿ ಕೊವಿಡ್ ೧೯ ಅಬ್ಬರಕ್ಕೆ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿದ್ದವು ಅದರಂತೆ ಕಾಲೇಜು ಕೂಡ ಹೊರತಾಗಿಲ್ಲ ಇನ್ನೂ ರಾಜ್ಯದಲ್ಲಿ ಕೊರೊನಾ ಹಾವಳಿ ದಿನದಿಂದ ತಗ್ಗುತ್ತಿರುವುದರಂದ ರಾಜ್ಯ ಸರಕಾರ ಅಧಿಕಾರಿಗಳ ಜೊತೆ ಚರ್ಚಿಸಿ ನವಂಬರ್ 17 ರಿಂದ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.ಅದರಂತೆ ಕಾಲೇಜು ಆಡಳಿತ ಮಂಡಳಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಾಸ್ ಹಾಗೂ ಥರ್ಮಲ್ ಸ್ಮಿನಿಂಗ್ ತಪಾಸಣೆ ಮತ್ತು ಕೊರೊನಾ ಟೆಸ್ಟ್ ಮಾಡಲು ಸಿದ್ದತೆ ನಡೆಸಿದೆ .ಇನ್ನೂ ಲಾಕ್ ಡೌನ್ ಸಂದರ್ಭದಲ್ಲಿ ಹಳ್ಳಿಯ ವಿಧ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ಕ್ಲಾಸ್ ಅಟೆಂಡ್ ಆಗಲು ಸಾಧ್ಯವಾಗಿರಲಿಲ್ಲ , ಈಗ ಮತ್ತೆ ಆಪಲೈನ್ ಕ್ಲಾಸ್ ಆರಂಭವಾಗುತ್ತಿದ್ದಂತೆ,ಹಳ್ಳಿ ವಿದ್ಯಾರ್ಥಿಗಳಿಗೆ ಸಂತಸಗೊಂಡಿದ್ದಾರೆ. ಆದರೇ ಲಾಕ್ ಡೌನ್ ಪರಿಣಾಮ ಅದೆಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ , ಹಳ್ಳಿಯಿಂದ ಬರುವ ವಿಧ್ಯಾರ್ಥಿಗಳಿಗೆ ಸರಕಾರ ಆದಷ್ಟು ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕು ಎಂದುವಿದ್ಯಾರ್ಥಿನಿ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ , ಪಾಸ್ ವ್ಯವಸ್ಥೆ ಕಲ್ಪಿಸಿದೇ ಹೋದರೆ ನಾವೂ ದಿನಕ್ಕೆ ನೂರಾರು ಖರ್ಚು ಆಗಿತ್ತದೆಎಂದು ವಿಧ್ಯಾರ್ಥಿಗಳು ತಮ್ಮ ಅಳಲು ತೊಡಗಿಕೊಂಡಿದ್ದಾರೆ . ಒಟ್ಟಿನಲ್ಲಿ ಒಂದು ಕಡೆ ಕೊರೊನಾ ಹಾವಳಿ ಇನ್ನೊಂದು ಕಡೆ ಆರ್ಥಿಕ ಸಂಕಷ್ಟದ ನಡುವೆಯೂ ಕಾಲೇಜು ಆರಂಭಸಿರುವ ಸರಕಾರ ಯಾವ ರೀತಿ ಮುಂದಿನ ದಿನಗಳಲ್ಲಿ ವಿಧ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂಬುದು ಕಾದು ನೋಡಬೇಕಾಗಿದೆ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version