ಸಿನಿಮಾ

ಕನ್ನಡಿಗನ ದೊಡ್ಡ ಸಾಧನೆಗೆ ಕೈಜೋಡಿಸಿರುವ ನಟ ಸೋನುಸೂದ್..!

Published

on

ಕಳೆದ ಕೆಲ ತಿಂಗಳಿಂದ ಕೊರೊನಾ ಸೋಂಕು ಎಲ್ಲೇಡೆ ತನ್ನ ಪ್ರಭಾವವನ್ನು ಬೀರಿತ್ತು. ಕೊರೊನಾ ನಿಯಂತ್ರಗೆಂದು ಸರ್ಕಾರ ಲಾಕ್ ಡೌನ್ ಅಸ್ತ್ರ ಉಪಯೋಗಿಸಿತ್ತು. ಇದರಿಂದ ಅನುಕೂಲದ ಜೊತೆಗೆ ಅನಾನುಕೂಲ ಆಗಿದ್ದು ಉಂಟು ಕೊಟ್ಯಾಂತರ ಜನ್ರು ಕೆಲಸ ಕಳೆದು ಕೊಂಡು ಒಂದೊತ್ತಿನ ಉಟಕ್ಕೂ ಪರಿತಪಿಸುವಂತಾಗಿತ್ತು ಈ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಕೈಹಿಡಿದಿದ್ದು ನಟ ಖ್ಯಾತ ನಟ ‘ಸೋನುಸುದ್’. ಇವರು ಒಂದಲ್ಲ ಒಂದು ರೀತಿಯಲ್ಲಿ ಜನರ ಸಂಕಷ್ಟಕ್ಕೆ ಬೆನ್ನುಲಾಬಿ ನಿಲ್ಲುತ್ತಿದ್ದಾರೆ. ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಟ ಸೋನುಸೂದ್ ಇದೀಗ ರಿಯಾಲಿಟಿ ಶೋದ ನಿರೂಪಕರಾಗಿ ಟಿವಿ ಪರದೆ ಮೇಲೆ ಬರಲು ಸಜ್ಜಾಗಿದ್ದಾರೆ. ರಿಯಾಲಿಟಿ ಶೋದ ನಿರ್ಮಾಣದ ಜವಬ್ದಾಋಇ ಹೊತ್ತಿರುವವರು ಬೇರ್ಯಾರು ಅಲ್ಲಾ ಸ್ಯಾಂಡಲ್ ವುಡ್ ಗೆ ‘ದಿಲ್ ಬಾರ್ ‘ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ‘ರಾಮ್ ಗೌಡ’.
ಈ ಹಿಂದೆ ಸಾಕಾಷ್ಟು ರಿಯಾಲಿಟಿ ಶೋಗಳನ್ನು ಮಾಡಿರುವ ರಾಮ್ ಗೌಡ ಇದೀಗ ಸೋನುಸೂದ್ ಜೊತೆ ರಿಯಾಲಿಟಿ ಶೋ ಮಾಡಲು ಮುಂದಾಗಿದ್ದಾರೆ. ರಿಯಾಲೀಟಿ ಶೋ ವನ್ನು ಸದ್ಯಕ್ಕೆ ಹಿಂದಿ ಭಾಷೆಯಲ್ಲಿ ಮಾಡಲಿದ್ದು ತದ ನಂತರ ಪ್ರಾದೇಶಿಕ ಭಾಷೆಗಳಲ್ಲೂ ಶೋ ಮಾಡುವ ಯೋಚನೆಯಿದೆಯಂತೆ. ಕೊರೊನಾ ಸಮಯದಲ್ಲಿ ಇಂತಹದೊಂದು ಅಲೋಚನೆ ರಾಮ್ ಗೌಡ ರವರಿಗೆ ಹೊಳೆದಿದ್ದು, ವಿದೇಶಗಳಲ್ಲಿ ಮನುಷ್ಯರಿಗಿಂತಲೂ ಅವರ ಐಡಿಯಾಗಳಿಗೆ ಒಳ್ಳೆಯ ಬೆಲೆ ಇದೆ. ಈ ಶೋ ಕಾನ್ಸೆಪ್ಟ್ ಕೂಡ ಅದೇ. ಒಳ್ಳೊಳ್ಳೆಯ ಸ್ಟಾರ್ಟ್ಅಪ್ ಐಡಿಯಾಗಳನ್ನು ಇಟ್ಟುಕೊಂಡಿರುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಯಾರದ್ದು ಪರಿಣಾಮಕಾರಿ ಐಡಿಯಾ ಎಂದು ನಮಗೆ ಅನಿಸುತ್ತದೋ ಅಂಥವರಿಗೆ ಧನಸಹಾಯ ಮಾಡಿ ಅವರ ಉದ್ಯಮವನ್ನು ಬೆಳೆಸುವುದೇ ಈ ಶೋ ದ ಮುಖ್ಯ ಉದ್ದೇಶ ಎಂದಿದ್ದಾರೆ. ಈಗಾಗಲೇ ಈ ರಿಯಾಲಿಟಿ ಶೋ ಬಗ್ಗೆ ಸೋನುಸೂದ್ ಬಳಿ ಮಾತಾನಾಡಿದ್ದು ಅವರಿಗೂ ಶೋ ಕಾನ್ಸೆಪ್ಟ್ ಇಷ್ಟ ಆಗಿದ್ದು, ಸಾಕಷ್ಟು ಕಂಪನಿಗಳು ಕೂಡ ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದಿದ್ದಾರೆ. ಇನ್ನು ಈ ರಿಯಾಲಿಟಿ ಶೋ ಗೆ ಟೈಟಲ್ ಫಿಕ್ಸ್ ಆದ ನಂತರ ಈ ಶೋವನ್ನು ಯಾವ ಚಾನೆಲ್ ನಲ್ಲಿ ಪ್ರಸಾರ ಮಾಬಹುದು ಎಂಬುವುದನ್ನು ಯೋಚಿಸುತ್ತೇವೆ. ಇನ್ನೂ ಶೋ ದ ಚಿತ್ರೀಕರಣ ಆರಂಭವಾಗಿಲ್ಲ ಸದ್ಯದಲ್ಲೇ ಈ ಶೋ ಬಗ್ಗೆ ಎಲ್ಲಾ ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ.

Click to comment

Trending

Exit mobile version