ವಿಜಯಪುರ

ಅಮಾಯಕ ಹೋರಾಟಗಾರರ ಮೇಲೆ ಪೋಲಿಸರ್ ದಬ್ಬಾಳಿಕೆ..!

Published

on

ವಿಜಯಪುರ: ಕಲ್ಬುರ್ಗಿ ಜಿಲ್ಲಾ ಅಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕಾಗಿ ಸುಮಾರು 86 ದಿನಗಳ ಕಾಲ ನಿರಂತರ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿರುವ ತಳವಾರ & ಪರಿವಾರ ಸಮುದಾಯದ ಜನರ ಮೇಲೆ ಪೋಲಿಸರ ದೌರ್ಜನ್ಯ ದಬ್ಬಾಳಿಕೆ ಹೆಚ್ಚುತ್ತಿದೆ. ಜೊತೆಗೆ ಅವಾಚ್ಯ ಪದಗಳಿಂದ ನಿಂದನೆ ಹಾಗೂ ಹೋರಾಟ ಹತ್ತಿಕುವ ಕೆಲಸ ಮಾಡುತ್ತಿದಿದ್ದು ಖಂಡನಿಯ ಎಂದು ತಳವಾರ & ಪರಿವಾರ ಯುವ ಸೈನ್ಯದ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಅಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಪೋಲಿಸ್ ವಿಜಯಪುರ ಜಿಲ್ಲಾ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಪಾಲರಿಗೆ, ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಸಮುದಾಯದ ಯುವ ಮಖಂಡ ಸಾಯಬಣ್ಣ ಬಾಗೇವಾಡಿ ಸ್ಟೆಷನ್ ಬಾಜಾರ ಪೊಲಿಸ್ ಇಲಾಖೆ ಸಿ.ಪಿ.ಐ ಜೊತೆ ವಿಜಯಪುರ ಅಪಾರ ಜಿಲ್ಲಾಧಿಕಾರಿಗಳು ಸಮುದಾಯದ ಬಗ್ಗೆ ಕೆಳಮಟ್ಟದಲ್ಲಿ ಮಾತಾನಾಡಿದ್ದಾರೆ. ಈ ಇಬ್ಬರನ್ನೂ ಕೂಡಲೇ ಅಮಾನತು ಮಾಡಬೇಕು ಇಲ್ಲಂದ್ರೆ ಹೋರಾಟದ ವ್ಯವಸ್ಥೆ ಬದಲಾವಣೆ ಗೊಳ್ಳುತ್ತೆ ಎಂದು ಎಚ್ಚರಿಕೆ ನೀಡಿದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ..

Click to comment

Trending

Exit mobile version