ಮೈಸೂರು

ತಾಲ್ಲೂಕು ದಂಡಾಧಿಕಾರಿ-ಪೊಲೀಸ್ ಇಲಾಖೆ ವಿರುದ್ದ ರೈತ ಸಂಘದಿಂದ ಉಗ್ರ ಹೋರಾಟಕ್ಕೆ ಸಿದ್ದತೆ..!

Published

on

ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲ್ಲೂಕಿನ ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನೊಂದ ರೈತ ಕುಟುಂಬಗಳಿಗೆ ನ್ಯಾಯ ಕೊಡಿಸದೇ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡುವವರೊಂದಿಗೆ ಉಳ್ಳವರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್ ಆರೋಪಿಸಿದ್ದಾರೆ. ಪಿರಿಯಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಕೆ.ಬಸವನಹಳ್ಳಿಯ ರೈತ ನಾರಾಯಣ್ ಹಲವಾರು ವರ್ಷಗಳಿಂದ ನ್ಯಾಯಕ್ಕಾಗಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಅಲೆಯುತ್ತಿದ್ದರು ನ್ಯಾಯ ಸಿಕ್ಕಿಲ್ಲ ಹಾಗೂ ಅನೇಕ ರೈತರು ಜಮೀನು ವಿವಾದಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.ವಿವಾದಗಳಿಗೆ ಸಿಲುಕಿದ ರೈತರು ನ್ಯಾಯಾಲಯದ ಮೊರೆ ಹೋಗಿ, ನ್ಯಾಯಾಲಯದ ತೀರ್ಪು ರೈತರ ಪರ ಬಂದರೂ ತಹಸೀಲ್ದಾರ್ ಶ್ವೇತಾ ರವೀಂದ್ರರವರು ಹಾಗೂ ಪೊಲೀಸ್ ಇಲಾಖೆಯವರು ರಾಜಕೀಯ ಒತ್ತಡಕ್ಕೆ ಒಳಗಾಗಿ ನೊಂದ ರೈತರಿಗೆ ನ್ಯಾಯ ಕೊಡಿಸದೇ ಅಧಿಕಾರಿ ಶಾಹಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವರದಿ-ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Click to comment

Trending

Exit mobile version