Uncategorized

ತೋಂಟದ ಡಾ. ಸಿದ್ದಲಿಂಗ ಶ್ರೀಗಳ ನಾಮ ಫಲಕ ತೆರವು..!

Published

on

ಸಿಂದಗಿ: ತೋಂಟದ ಡಾ.ಸಿದ್ದಲಿಂಗ ಶ್ರೀಗಳು ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಮಠದ ಪಿಠಾಧಿಪತಿಗಳಾಗಿ 50 ರಿಂದ 60 ವಿಧ್ಯಸಂಸ್ಥೆ ಸ್ಥಾಪಿಸಿ ಬಡವರಿಗೆ ದಿನ ದಲಿತರಿಗೆ ಅಕ್ಷರ ದಾಸೋಹ ನಿಡಿದವರು ತೊಂಟದ ಶ್ರೀಗಳು. ಅಂತಹ ಮಹಾನ ಶರಣರು ಇದೆ ಸಿಂದಗಿಯಲ್ಲಿ ಜನ್ಮತಾಳಿದವರು ಅದಕ್ಕೆ ಸಿಂದಗಿಗೆ ಬಂಗಾರದ ಬಿಂದುಗೆ ಎಂದು ಕರೆಯಲಾಗುತ್ತೆ. ತತ್ವ ಎಂದರೆ ಸಿದ್ದಾಂತ ಮತ್ತು ಪರಮಾತ್ಮನ ನಿಜ ಸ್ಥಿತಿ ಎಂದೆಲ್ಲ ಅರ್ಥಗಳನ್ನುಳ್ಳದ್ದು ಪದ ಎಂಬುದು ಹಾಡು ಹದಗೊಂಡ ಶಬ್ದ ಎಂದು ಭಾವಿಸಲಾಗಿದೆ. ಪರಮಾತ್ಮನಿಗೆ ಸಂಬಂಧಿಸಿದ ಸಿದ್ದಾಂತವನ್ನು ತಮ್ಮ ವಾಖ್ಯ ವಾಣಿಗಳ ಮುಖಾಂತರ ಭಕ್ತಾದಿಗಳಿಗೆ ಸಾರಿದವರು ಗದುಗಿನ ತೋಂಟದ ಡಾ.ಸಿದ್ದಲಿಂಗ ಸ್ವಾಮಿಜಿಗಳು. ಎರಡು ವರ್ಷದ ಹಿಂದೆ ಶ್ರೀಗಳು ಲಿಂಗೈಯಕ್ಕೆ ಆದರು ಅಂತಹ ಮಾಹನ ಶರಣ ಸತ್ಪುರುಷರಾದ ಶ್ರೀಗಳ ಮೂಲತ ಸಿಂದಗಿ ಪಟ್ಟಣದವರಾಗಿರುವುದರಿಂದ ಸ್ವಾಮೀಜಿಗಳ ಸವಿನೆನಪಿಗಾಗಿ ಶ್ರೀಗಳ ಜನ್ಮ ಭೂಮಿಯಾದ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಸ್ವಾಮಿ ವಿವೆಕಾನಂದ ಸರ್ಕಲನಿಂದ ಎಸ್ ಬಿಐ ಬ್ಯಾಂಕಿಗೆ ಹೊಗುವ ರಸ್ತೆಗೆ ಸಿಂದಗಿ ಪುರಸಭೆ ತೊಂಟದ ಡಾ.ಸಿದ್ದಲಿಂಗ ರಸ್ತೆ ಎಂದು ನಾಮಕರಣ ಮಾಡಿತ್ತು. ಆದರೆ ಈಗಾ ಕಾಮಗಾರಿ ನೆಪದಲ್ಲಿ ಶ್ರೀಗಳ ನಾಮ ಫಲಕವನ್ನು ತೆರವುಗೊಳಸಿ ಶ್ರೀಗಳಿಗೆ ಅವಮಾನಿಸಿದ್ದನು ಖಂಡಿಸಿ ತಾಲೂಕು ಆಡಳಿತ ಮತ್ತು ಪಿಡಬ್ಲ್ಯೂಡಿ ಪುರಸಭೆ ವಿರುದ್ದ ತಾಲೂಕಿನ ಜನತೆ ಆಕ್ರೊಷ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ತಾಲೂಕು ಆಡಳಿತ ಎಚ್ಚೇತ್ತುಕೊಂಡು ಮತ್ತೇ ಶ್ರೀಗಳ ನಾಮಫಕವನ್ನು ಅಳವಡಿಸ ಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

ವರದಿ- ಅಂಬರೀಶ್ ಸುಣಗಾರ ಎಕ್ ಪ್ರೆಸ್ ಟಿವಿ ಸಿಂದಗಿ

Click to comment

Trending

Exit mobile version