Uncategorized

ಬಹುಮುಖ ಪ್ರತಿಭೆ ಕೆ.ವಿ ನಾಗರಾಜ್ ರವರಿಗೆ ಸನ್ಮಾನ..!

Published

on

ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ ಕವಿ ಉದಯವಾಣಿ ವರದಿಗಾರರಾಗಿರುವ ಲೇಖಕರು ಹಾಗೂ ಸಮಾಜ ಸೇವಕರು ಆಗಿರುವ ಕೆ.ವಿ ನಾಗರಾಜ್ ರವರ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ರಾಜ್ಯ ಸಂಪನ್ಮೂಲ ವ್ಯಕ್ತಿ ಕಲ್ಲೂರು ವೆಂಕಟರೆಡ್ಡಿ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಕನ್ನಡ ತೆಲುಗು ಮಿಶ್ರಿತ ಈ ಪ್ರದೇಶದಲ್ಲಿ ಕಳೆದ 3ದಶಕಗಳಿಂದ ನಾಡು ನುಡಿ ಸಾಹಿತ್ಯ ಪತ್ರಕರ್ತರಾಗಿ ಬಹುಮುಖ ಪ್ರತಿಭೆ ಹೊಂದಿರುವ ಕೆ.ವಿ ನಾಗರಾಜ್ ರವರು ತಮ್ಮ ಸೇವೆಯನ್ನು ಚಿಕ್ಕಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.1992ರಲ್ಲಿ ಭಾರತ ಸರ್ಕಾರ ನೆಹರು ಯುವ ಕೇಂದ್ರ ವತಿಯಿಂದ ಇವರ ಸೇವೆಯನ್ನು ಗುರುತಿಸಿ ಆಗಲೇ ಇವರಿಗೆ ಜಿಲ್ಲಾ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ತದನಂತರ ಜಿಲ್ಲೆಯ ಬಹುತೇಕ ಕಡೆ ಸರ್ಕಾರ ಕಾರ್ಯಕ್ರಮಗಳು ಸೇರಿದಂತೆ ಸಂಘ ಸಂಸ್ಥೆಗಳು ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಿವೆ .ಇವರು ಪತ್ರಕರ್ತರಾಗಿ ಸೇವೆ ಸಲ್ಲಿಸುವುದರ ಜೊತೆಯಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಂಡು 1992ನೇ ಸಾಲಿನಲ್ಲಿ ದೇಶಭಕ್ತಿ ಗೀತೆಗಳ ಸಂಕಲನ 2001ರಲ್ಲಿ ನಮ್ಮ ಹಾಡು ಶಿಶುಗೀತೆಗಳು 2004 ನೇ ಸಾಲಿನಲ್ಲಿ ನಾವು ನಮ್ಮ ದೇಶ ದೇಶಭಕ್ತಿ ಗೀತೆಗಳು ಹಾಗೂ 2019 ರಲ್ಲಿ ಕ್ಷಣ ಬದುಕುವ ಹೂವೆ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ.ಸಂಬಂಧಪಟ್ಟ ಇವರ ಸೇವೆಯನ್ನು ಗುರುತಿಸಿ ಸರ್ಕಾರದ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿದ್ದಾರೆ.ಅದೇ ರೀತಿ ಕನ್ನಡ ಸಿರಿ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಕೆ ವಿ ನಾಗರಾಜ್ ರವರ ಮನೆಯ ಅಂಗಳದಲ್ಲಿ ನಡೆಸಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಾಗರಾಜ್ ರವರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ನಾರಾಯಣಪ್ಪ, ಶರಣಪ್ಪ ಗಬ್ಬೂರ, ಶಂಕರೇಗೌಡ , ವಿ ರಾಧಾಕೃಷ್ಣ , ಪದ್ಮಾ, ಕಲಾ ಶಂಕರ್ ,ನಟರಾಜ್ .ಎಂ ರಾಮಚಂದ್ರ, ಸುನಂದಮ್ಮ, ಎಚ್ಚೆನ್ ಹೇಮಾವತಿ, ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು

ವರದಿ- ರಾಮಪ್ಪ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Click to comment

Trending

Exit mobile version