ಸಿಂಧನೂರು

ಅಬಕಾರಿ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಚರಣೆ 10 ಲಕ್ಷ ಮೌಲ್ಯದ ಮದ್ಯ ವಶ-ಆರೋಪಿ ಬಂಧನ..!

Published

on

ಸಿಂಧನೂರು: ಅಕ್ರಮವಾಗಿ ಸುಮಾರ 10 ಲಕ್ಷದ ಮಧ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನಾದ್ಯಂತ ಮದ್ಯ ಅಕ್ರಮವಾಗಿ ಮಾರಾಟ ಹಾಗೂ ಸಾಗಾಣಿಕೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಅಕ್ರಮವಾಗಿ ಮಾರಾಟ ಹಾಗೂ ಸಾಗಾಣಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದು. ತಾಲೂಕಿನ ಕೆಂಗಲ್ ಕ್ರಾಸ್ನಲ್ಲಿ ಖಚಿತ ಮಾಹಿತಿ ಮೇರೆಗೆ ಮಹೀಂದ್ರ XYLO D2 MDI CRDE ವಾಹನ ಸಂಖ್ಯೆ AP-21 AG-7272 ನೇದಲ್ಲಿ 673.920 ಲೀಟರ್ ಮದ್ಯವನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವಾಗ ದಾಳಿ ಮಾಡಿ ಸದರಿ ಮದ್ಯವನ್ನು ಮತ್ತು ಮದ್ಯ ಸಾಗಾಣಿಕೆಗೆ ಬಳಸಿದ ವಾಹನವನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಶ್ರೀನಿವಾಸ ತಂದೆ ಪಕೀರಪ್ಪ, ದಸ್ತಗಿರಿ ಮಾಡಲಾಗಿದ್ದು. ವಾಹನ ಚಾಲಕ ಪ್ರಶಾಂತ್ ತಂದೆ ವಿರುಪಣ್ಣ ಕರಡಿ ಎಂಬುವವನು ಪರಾರಿಯಾಗಿದ್ದು .ಪರಾರಿಯಾದ ಆರೋಪಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲಾಗುತ್ತದೆ ಎಂದು ಶ್ರೀ.ಸಿದ್ದರೂಡ ಲಕ್ಕಶಟ್ಟಿ ಅಬಕಾರಿ ಮುಖ್ಯ ಅಧಿಕಾರಿ ತಿಳಿಸಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version