ಸಿಂಧನೂರು

ಸಿಂಧನೂರು ನಗರದಲ್ಲಿ ಬೆಳಂಬೆಳಿಗ್ಗೆ ಅಕ್ರಮವಾಗಿ ಮದ್ಯ ಮಾರಾಟ..!

Published

on

ಸಿಂಧನೂರು: ನಿಯಮ ಬಾಹಿರವಾಗಿ ಬಾರ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಮಧ್ಯ ಮಾರಾಟ ಮಾಡುತ್ತಿರುವ ಘಟನೆ ಬೆಳಕಿದೆ ಬಂದಿದೆ. ನಿಯಮದಂತೆ 9 ಗಂಟೆ ನಂತರ ಬಾರ್ ಗಳನ್ನು ತೆರೆಯಬೇಕು. ಆದರೆ ಸಿಂಧನೂರು ನಗರದ ಸಾಮ್ರಾಟ್ ಮತ್ತು ಸ್ವಪ್ನಾ ಬಾರ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಂದು ಮುಷ್ಕರ ಹಿನ್ನಲೆ ಮದ್ಯಕ್ಕೆ ಮತ್ತಷ್ಟು ಬೇಡಿಕೆ ಬಂದಿದ್ದು. ಅಂಗಡಿಯ ಅರ್ಧಬಾಗಿಲು ತೆಗೆದು ದುಪ್ಪಟ್ಟು ಬೆಲೆಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಪ್ರತಿನಿತ್ಯ ಇದೇ ಕೆಲಸ ಮಾಡುತ್ತಿದ್ದು ನಿಯಮ ಬಾಹಿರವಾಗಿ ಮದ್ಯ ಮಾರಾಟ ಮಾಡುವ ಬಾರ್ ಗಳ ವಿರುದ್ದ ಕ್ರಮಕ್ಕೆ ಮುಂದಾಗಬೇಕಿದೆ.

ವರದಿ- ಸೈಯದ್ ಬಂಧನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Click to comment

Trending

Exit mobile version