Uncategorized

ಮದುವೆ ದಿನ ಅಳಿಯನಿಗೆ Ak 47 ಗನ್ ಉಡುಗೊರೆ ನೀಡಿದ ಅತ್ತೆ..!

Published

on

ಪಾಕಿಸ್ತಾನ: ಮದುವೆ ದಿನ ಅಳಿಯನಿಗೆ ಅತ್ತೆ ಮನೆಯಿಂದ ಚಿನ್ನ, ಕಾರು, ಸೈಟ್, ಮನೆ ಹೀಗೆ ದುಬಾರಿ ಗಿಫ್ಟ್ ಗಳನ್ನು ಕೊಡುವವರನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಪಾಕಿಸ್ತಾನ ಮಹಾತಾಯಿ ಅತ್ತೆಯೊಬ್ಬಳು ಮದುವೆ ದಿನ ತನ್ನ ಅಳಿಯನಿಗೆ ನೀಡಿರುವ ಗಿಫ್ಟ್ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ..ಹೌದು.. ಪಾಕಿಸ್ತಾನದಲ್ಲಿ ಅತ್ತೆಯೊಬ್ಬಳು ಮದುವೆ ದಿನ ತನ್ನ ಅಳಿಯನಿಗೆ ಎಕೆ 47 ಗನ್ ಅನ್ನು ಉಡುಗೊರೆಯಾಗಿ ನೀಡಿದ್ದಾಳೆ. ಈ ಗಿಫ್ಟ್ ನೀಡುತ್ತಿರುವ ವಿಡಿಯೋವನ್ನು ಸೈಯದ್ ಎಂಬವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಮದುವೆ ಮುಗಿದ ಬಳಿಕ ವಧು-ವರ ಚೇರ್ ಮೇಲೆ ಕುಳಿತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ವಧುವಿನ ತಾಯಿ ಮೊದಲಿಗೆ ವರನ ಹಣೆಗೆ ಮುತ್ತಿಡುತ್ತಾಳೆ. ನಂತರ ಆತನಿಗೆ ಎಕೆ-47 ಗನ್ ಅನ್ನು ಉಡುಗೊರೆಯಾಗಿ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾಳೆ. ಅಲ್ಲಿಂದ ಜನರೆಲ್ಲ ಅಗ ಕಿರುಚುತ್ತಾರೆ. ನಂತರ ಆಕೆ ವಧು-ವರರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆ. ಇನ್ನು ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಇಂತಹ ಅತ್ತೆ ಸಿಗಬೇಕು ಎಂದು ಬರೆದೊಂಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version