Uncategorized

ವಿದ್ಯಾಭ್ಯಾಸ ಇಲ್ಲದಿದ್ದರೆ ನಾಳೆ ಹೆಣ್ಷು ಕೋಡೊಕೆ ಯಾರು ಮುಂದೆ ಬರುವುದಿಲ್ಲ-ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ..!

Published

on

ಪಾವಗಡ: ಪಾವಗಡ ಪಟ್ಟಣದ ಜಾಮೀಯ ಶಾದಿಮಾಹಲ್ ನಲ್ಲಿ ಶನಿವಾರದಂದು ಶ್ರೀಕುಮಾರ್ ಸ್ವಾಮಿ ಮತ್ತು ಡಾ.ಎಪಿಜೆ ಅಬ್ದುಲ್ ಕಲಾಂ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಮಾಜಿ ಸಚಿವ ಹಾಲಿಶಾಸಕ ವೆಂಕಟರಮಣಪ್ಪ ‘ ಹಿರಿಯರನ್ನು ಗೌರವದಿಂದ ಕಾಣಬೇಕಾದರೆ ಅದು ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ, ಪೋಷಕರು ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸುತ್ತಾರೆ ಅವರಿಗೆ ಸಂತೋಷವಾಗುವುದು ಯಾವಾಗ ಎಂದರೆ ಇಂತಹ ಕಾರ್ಯಕ್ರಮಗಳ ವೇದಿಕೆಯಲ್ಲಿ ನಿಮ್ಮನ್ನು ಗಣ್ಯರಿಂದ ಸನ್ಮಾನಿಸಿದಾಗ ಅವರಿಗೆ ಅಗುವ ಒಂದು ಸಂತೋಷ ಅಷ್ಟಿಷ್ಟಲ್ಲ. ಅದರಿಂದ ಪೋಷಕರನ್ನು ಸತಾಯಿಸಿ ಸೋಮರಿಗಳಂತೆ ಅಲೆದಾಡುವಂತಹ ಯುವಕರು ಇಂತಹ ವೇದಿಕೆಗಳ ಕಾಣುವ ಮಕ್ಕಳಿಗೆ ನೋಡಿ ಕಲೆಯಬೇಕು ಎಂದರು. ಎಸ್.ಎಸ್.ಕೆ.ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಅಂಕಗಳಿಗೆ ಮಾತ್ರ ಓದಬೇಡಿ ಭವ್ಯ ಸಮಾಜ ತಿದ್ದುವಂತವರಾಗುವ ಶಿಕ್ಷಣ ಪಡೆದು ಪೋಷಕರ ಹಾಗೂ ಕಲಿಸುವ ಗುರುಗಳನ್ನು ಗೌರವಿಸುವಂತರಾಗಿ ಎಂದರು. ಇನ್ನೂ ಕಾರ್ಯಕ್ರಮ ದ ವೇದಿಕೆ ಅಧ್ಯಕ್ಷ ರಿಜ್ವಾನ್ ಉಲ್ಲಾ.ಮಾತನಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸತತವಾಗಿ ಎಂಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೆವೆ ವಿಶೇಷ ಅಂದರೆ ನಮ್ಮ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನು ಅತಿಹೆಚ್ಚು ಅಂಕಗಳನ್ನುಗಳಿಸಿದಂತಹ ಮಕ್ಕಳನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ನಮ್ಮ ಸಮುದಾಯದವರು ಯುವಕರು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದರೆ ಎಂದು ತಿಳಿಸಿದರು. ಈ ವೇಳೆ ಜಾಮೀಯ ಮಸೀದಿಯ ಮುತ್ತವಲ್ಲಿ ಫಜ್ಲುಸಾಬ್, ಪುರಸಭೆಯ ಉಪಾಧ್ಯಕ್ಷ ಸುಧಲಕ್ಮಿ ಪ್ರಮೋದ್, ಆರ್.ಟಿ.ಖಾನ್.ಪುರಸಭೆ ಸದಸ್ಯರಾದ ಮಹಮ್ಮದ್ ಇಮ್ರಾನ್, ವೇಲುರಾಜ್, ಜಾವಿದ್ ಅಹ್ಮದ್, ಷ.ಬಾಬು.ಶಿಕ್ಷಕ ಸಾಧಿಕ್ ಸೇರಿದಂತೆ ಮತ್ತೀತರು ಭಾಗವಹಿಸಿದ್ದರು.

ವರದಿ-ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Click to comment

Trending

Exit mobile version