ಸಿಂಧನೂರು

ರಾಗಲಪರ್ವಿ ಆಸ್ಪತ್ರೆ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ..!

Published

on

ಸಿಂಧನೂರು: ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ, ಹಾಗೂ ಸಿಬ್ಬಂದಿ ವರ್ಗದವರು ಸಹ ಸರಿಯಾದ ಸಮಯದಲ್ಲಿ ಇರುವುದಿಲ್ಲ. ರಾತ್ರಿ ಪರಿಸ್ಥಿತಿಯಂತೂ ದೇವರೇ ಬಲ್ಲ ಹೀಗಾಗಿ ‘ದೇವರಿಲ್ಲದ ಗುಡಿ ಯಂತಾಗಿದೆ’ ಹತ್ತಾರು ಗ್ರಾಮಗಳ ಜನರು ರಾಗಲಪರ್ವಿ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆದರೆ ವೈದ್ಯರಿಲ್ಲದ ಕಾರಣ ಬಡರೋಗಿಗಳ ಬೇಸರದಿಂದ ಸಿಂಧನೂರ ಅಥವಾ ಮಾನ್ವಿ ಗೆ ಚಿಕಿತ್ಸೆ ಪಡೆಯಬೇಕಾಗಿದೆ. ಆದರೆ ಆಸ್ಪತ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದೆ. ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಸಾರ್ವಜನಿಕರು ಹಲವಾರು ಬಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಶೂನ್ಯವಾಗಿದೆ. ಇತ್ತೀಚಿನ ನಾಲ್ಕೈದು ತಿಂಗಳಿಂದ ಕೋವಿಡ್-19 ವೈರಾಣು, ಎಲ್ಲಾ ಕಡೆಗೆ ಪಸರಿಸಿದ್ದು ಈ ಭಾಗದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ ಸಾರ್ವಜನಿಕರು ಆಸ್ಪತ್ರೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ದುರಸ್ತೆ ಮಾಡಲಾರದಷ್ಟು ಅದೇ ಕಟ್ಟಿದ್ದರು ಸಿಂಧನೂರಿನ ಶಾಸಕರಾದ ವೆಂಕಟರಾವ್ ನಾಡಗೌಡ ರಾಗಲಿ, ತಹಸಿಲ್ದಾರ್ ಗಳಾಗಲಿ ಆಸ್ಪತ್ರೆಯ ವ್ಯವಸ್ಥೆಯನ್ನು ಗಮನಿಸಿದಂತೆ ಕಾಣುತ್ತಿಲ್ಲ.

ವರದಿ- ರಫಿ ಎಕ್ಸ್ ಪ್ರೆಸ್ ಟಿವಿ ಮಾನ್ವಿ

Click to comment

Trending

Exit mobile version