ಬಾಗಲಕೋಟೆ

ತೇರದಾಳ ಮತಕ್ಷೇತ್ರದ ಶಾಸಕರು ರಾಜೀನಾಮೆ ನೀಡಬೇಕೆಂದು ಕೆಲವು ಸಂಘಟನೆಗಳ ಪ್ರತಿಭಟನೆ..!

Published

on

ಬಾಗಲಕೋಟೆ: ಕಳೆದ ಕೆಲವು ದಿನಗಳ ಹಿಂದೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಹಿಳಾ ಸದಸ್ಯರ ಮೇಲೆ ನಡೆದ ಜಗ್ಗಾಟ ಪ್ರಕರಣಕ್ಕೆ ಸಂಭದಿಸಿದಂತೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿವಿಧ ಸಂಘಟನೆಗಳು ಮಹಾಲಿಂಗಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಮಹಲಿಂಗಪುರ ಪುರಸಭೆ ಚುನಾವಣೆ ಕಳೆದ ಇದೆ ತಿಂಗಳುರಂದು ನಡೆದಿತ್ತು. ಆದರೆ ಬಿಜೆಪಿ ಪಕ್ಷದ ಮೂವರು ಮಹಿಳಾ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಅಧ್ಯಕ್ಷ ಸ್ಥಾನ ಹೀಡಿಯುವುದಕ್ಕೆ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ನತ್ತ ಮುಖ ಮಾಡಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಶಾಸಕರ ಸಮ್ಮುಖದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಪುರಸಭೆಯ ಆವರಣದಲ್ಲಿ ಮತ ಚಲಾಯಿಸಲು ಬೀಡದೆ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ವಾಗ್ವಾದ ನಡೆದು ಅವರನ್ನು ಏಳೆದಾಡಿದ್ದರು. ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ಕೂಡಾ ಇದ್ದರು. ಅಚಾನಕ್ಕಾಗಿ ಅವರು ಗದ್ದಲದ ನಡುವೆ ನೂಕು ನುಗ್ಗಲು ಉಂಟಾಗಿ ಅವರು ಮಹಿಳಾ ಅಭ್ಯರ್ಥಿಯನ್ನು ಏಳೆದಾಡಿದ್ದಾರೆ ಎಂದಿ ಆರೋಪಿಸಿ ಕೆಲವು ಸಂಘಟನೆಗಳು ಇಂದು ಶಾಸಕರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ವರದಿ- ಶ್ಯಾಮ ತಳವಾರ ಎಕ್ಸ್ ಪ್ರೆಸ್ ಟಿವಿ ಜಮಖಂಡಿ

Click to comment

Trending

Exit mobile version