Uncategorized

ಪತ್ರಿದಿನ ರಸ್ತೆ ಜಾಮ್ -ನಿದ್ದೆಗೆ ಜಾರಿದ ಪೋಲಿಸ್ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು.

Published

on

ಪಾವಗಡ: ಪಾವಗಡದಲ್ಲಿ ಪ್ರತಿ ಸೋಮವಾರ ಹಾಗೂ ಇತರೆ ದಿನ ಸಂತೆ ನಡೆಯುವ ಕಾರಣ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಬೆಳೆದ ತರಕಾರಿ ವ್ಯಾಪಾರಕ್ಕಾಗಿ ಬರುವುದು ಒಂದು ವಾಡಿಕೆ. ಅದರೆ ಅವರಿಗೆ ಒಂದು ನಿರ್ದಿಷ್ಟವಾದ ಸ್ಥಳ ಇಲ್ಲವಾದಲ್ಲಿ ಪಟ್ಟಣದ ಪ್ರಮುಖ ರಸ್ತೆಯೇ ಮಾರುಕಟ್ಟೆಯಾಗಿ ಬಿಟ್ಟಿದೆ. ಇದರಿಂದ ಈ ರಸ್ತೆಯಲ್ಲಿ ಓಡಾಡುವ ಜನರಿಗೆ ಪತ್ರಿದಿನ ಕಿರಿಕಿರಿ ಯಾಗಿದೆ. ಇರುವ ಈ ಒಂದೇ ರಸ್ತೆಯಲ್ಲಿ ವಾಹನಗಳು, ಜಾನುವಾರುಗಳು, ಹಾಗೂ ಸಾರ್ವಜನಿಕರು ಓಡಾಡುವ ಪರಿಣಾಮವಾಗಿ ಗ್ರಾಮೀಣ ಭಾಗದಿಂದ ರೈತರು ಬೆಳೆದಂತಹ ತರಕಾರಿ ತರುವ ವಾಹನಗಳು ಅಡ್ಡಾದಿಡ್ಡಿಯಾಗಿ ಬಿಟ್ಟುಹೋದಂತಹ ವೇಳೆ ಈ ರಸ್ತೆಯಲ್ಲಿ ಸಾಮಾನ್ಯ ಜನರಿಗೆ ಬಹಾಳಷ್ಟು ತೋದರೆಯಾಗುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯವರು ನಿದ್ದೆಗೆ ಜನರಿದ್ದಾರೆ. ಈ ರಸ್ತೆ ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಜನಸಾಂದ್ರತೆ ವ್ಯಾಪಾರ ವಹಿವಾಟು ಪ್ರಾರಂಭವಾಗುತ್ತದೆ .ಈ ರಸ್ತೆಯಲ್ಲಿ ಓಡಾಡುವ ಬಸ್ ಗಳು ಇತರೆ ವಾಹನಗಳಿಗೆ ಪ್ರತಿದಿನ ಕಿರಿಕಿರಿ ಅನುಭವಿಸುತ್ತಿದ್ದರೆ.ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಜನರಿಗೆ ಸೂಕ್ತ ವಾದ ಸ್ಥಳ ನಿಗದಿ ಮಾಡಿ ಅವರಿಗೆ ವ್ಯಾಪಾರ ನಡೆಸಲು ಅನುಕೂಲ ಮಾಡಿಕೋಡಬೇಕು ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದರೆ.ಇದರ ಬಗ್ಗೆ ತಹಶಿಲ್ದಾರರ ನಾಗರಾಜ್ ರವರಿಗೂ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಿಲ್ಲದಂತಾಗಿದೆ.

ವರದಿ- ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಪಾವಗಡ

Click to comment

Trending

Exit mobile version