ರಾಯಚೂರು

ಡಿಸೆಂಬರ್ 3-4 ಕ್ಕೆ ದುಂಡು ಮೇಜಿನ ಸಭೆ- ರಾಘವೇಂದ್ರ ಕುಷ್ಟಗಿ..!

Published

on

ರಾಯಚೂರು: ಬೆಳೆ, ಪ್ರದೇಶವಾರು ರೈತ ಸಂಘಟನೆಗಳ ಅಸ್ತಿತ್ವದ ಆಧಾರದ ಮೇಲೆ ಹೋರಾಟಗಳು ಒಂದು ನೆಲೆಯಲ್ಲಿ ಒಗ್ಗೂಡಿಸುವ ಜವಾಬ್ದಾರಿ ಹೋರಾಟ ಮತ್ತು ಹೋರಾಟ ರೂಪಿಸುವವರ ಮೇಲಿದ್ದು ಇದರ ಭಾಗವಾಗಿ ಡಿಸೆಂಬರ್ 3 ಮತ್ತು 4 ರಂದು ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ ಎಂದು ಜನಾಂದೋಲನದ ರಾಜ್ಯ ಸಂಚಾಲಕ ರಾಘವೇಂದ್ರ ಕುಷ್ಟಗಿ ತಿಳಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ಕೃಷಿ ಬಿಕ್ಕಟ್ಟು ಖಾರಣ, ಪರಿಣಾಮ ಮತ್ತು ಪರಿಹಾರದ ದುಂಡಉ ಮೇಜಿನ ಸಭೆ ಇದಾಗಿದ್ದು ನಗರದ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.ಕೃಷಿ ಬಿಕ್ಕಟ್ಟಿನ ಶೇ.5 ರಷ್ಟ ಸಮಸ್ಯೆಯಾಗಿರುವ ಬೆಂಬಲ ಬೆಲೆ ಮತ್ತು ಸಾಲ ಮನ್ನಾಕ್ಕಾಗಿ ಮಾತ್ರ ರೈತರು ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಉಳಿದ ಶೇ.95 ರಷ್ಟು ರೈತರ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಇದರ ಕುರಿತು ಗಂಭೀರ ಚರ್ಚೆ ಆಗಬೇಕಾಗಿದೆ. ಈ ಸಭೆಯಲ್ಲಿ ರೈತರ ಗಂಭೀರ ಮತ್ತು ಮುಖ್ಯ ವಾಹಿನಿಯಲ್ಲಿ ಇಲ್ಲದ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಜನತಂತ್ರ ಪ್ರಯೋಗ ಶಾಲಾ, ಕರ್ನಾಟಕ ರಾಜ್ಯ ರೈತ ಸಂಘ, ಸ್ವಾಭಿಮಾನಿ ರೈತರ ಸೌಹಾರ್ಧ ಸಹಕಾರಿ ಸಂಘ, ಕರ್ನಾಟಕ ರೈರ ಸಂಘ, ಜನಸಂಗ್ರಾಮ ಪರಿಷತ್ ಮತ್ತು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಸಂಯುಕ್ತ ಸಂಯೋಜಿತ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ದೇಶದ ಪ್ರತಿಯೊಬ್ಬ ರೈತರ ದೆಹಲಿಯಲ್ಲಿ ನಡೆಯುತ್ತಿರುವ ಮಹಾದೊಡ್ಡ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟಗಳನ್ನು ಕೇವಲ ಪಂಚಾಬ್ ಮತ್ತು ಹರಿಯಣದ ರೈತರು ಮಾಡುತ್ತಿದ್ದಾರೆ ಎಂಬ ಹೇಳಿಕೆಗಳು ಸರಿಯಲ್ಲ. ಇದೊಂದು ದೇಶದ ಪ್ರತಿಯೊಬ್ಬ ರೈತರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಹೋರಾಟ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಹೈ-ಕ ಜನಾಂದೋಲನ ಕೇಂದ್ರದ ಅಧ್ಯಕ್ಷ ಖಾಜಾ ಅಸ್ಲಂ ಅಹೆಮದ್, ಚಿಂತಕ ತಾಯಣ್ಣ ಯರಗೇರಾ ಇದ್ದರು.ಡಿ.5 ರಂದು ತಾಲೂಕು ಮಾದಿಗ ಜಾಗೃತಿ ಸಮಾವೇಶ-ಬಾಲಸ್ವಾಮಿ ಕೊಡ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ತಾಲೂಕು ಸಮಿತಿ ವತಿಯಿಂದ ತಾಲೂಕು ಮಾದಿಗ ಜಾಗೃತಿ ಸಮಾವೇಶ ಸಮಾರಂಭವನ್ನು ಡಿ.5ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಅವರು ಹೇಳಿದರು.ಅವರಿಂದು ಸುದ್ದಿಗರೊಂದಿಗೆ ಮಾತಾನಡುತ್ತ ಡಿ.05ರಂದು ಬೆಳಿಗ್ಗೆ 10-30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ತಾಲೂಕು ಸಮಿತಿ ವತಿಯಿಂದ ತಾಲೂಕು ಮಾದಿಗ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಹರಿಜನವಾಡ ಬಡಾವಣೆಯಿಂದ 500 ಬೈಕ್ ರ್ಯಾಲಿ ಯ ಮುಖಾಂತರ ರಾಜ್ಯಾಧ್ಯಕ್ಷ ಆರ್.ಬಿ.ತಿಮ್ಮಾಪುರ್ ಅವರು ನಗರದಲ್ಲಿ ಅಂಬೇಡ್ಕರ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಬಾಬು ಜಗಜೀವನ್ ರಾವ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ಜ್ಯೋತಿ ಬೆಳಗಿಸುವರು, ಅಧ್ಯಕ್ಷತೆಯನ್ನು ಎ.ಬಾಲಸ್ವಾಮಿ ಕೊಡ್ಲಿ ವಹಿಸಿದ್ದು,ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್ಎಸ್ ಬೋಸರಾಜು, ಬಿ.ವಿ.ನಾಯಕ್,ಬಸನಗೌಡ ದದ್ದಲ್,ಪದ್ಮಾವತಿ,ವೀರಭದ್ರಪ್ಪ ಹಲಾರವಿ, ತಿಪ್ಪರಾಜು ಹವಲ್ದಾರ್ ,ರವೀಂದ್ರ ಜಲ್ದಾರ್ ಸೇರಿದಂತೆ ಇನ್ನಿತರ ಆಗಮಿಸಲಿದ್ದಾರೆ ಎಂದು ಹೇಳಿದರು.

ವರದಿ- ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Click to comment

Trending

Exit mobile version