Uncategorized

ಕೇಂದ್ರದ ವಿರುದ್ಧ ರೈತ ಸಂಘ ಹಾಗೂ ಸಿಪಿಎಂ ಇಂದ ಪ್ರತಿಭಟನೆ..!

Published

on

ಶ್ರೀನಿವಾಸಪುರ: ದಿಲ್ಲಿಯಲ್ಲಿ ನೆಡೆಯುವತಿರುವ ರೈತರ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಖಂಡಿಸಿ ಶ್ರೀನಿವಾಸಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ದಿಂದ ಪ್ರತಿಭಟನೆ ಮಾಡಲಾಯಿತು. ಕೇಂದ್ರ ಸರ್ಕಾರ ರೈತರ ಮೇಲಿ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ರೈತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರ ಜಾರಿಗೋಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ರದ್ದೂಗೊಳಿಸಲು ಒತ್ತಾಯಿಸಿ ಉತ್ತರ ಪ್ರದೇಶ, ಜಾರ್ಕಂಡ್, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಿಂದ ಲಕ್ಷಾಂತರ ರೈತರು ದಿಲ್ಲಿ ಚಲೋ ಮೂಲಕ ಸರ್ಕಾರದ ಜೊತೆ ಮಾತುಕತೆ ನಡೆಸುವ ಉದ್ದೇಶದಿಂದ ದಿಲ್ಲಿ ಗಡಿಭಾಗದ ವರೆಗೂ ತಲುಪಿದ್ದಾರೆ. ಆದ್ರೆ ನರೇಂದ್ರ ಮೋದಿ ಸರ್ಕಾರ ರೈತರನ್ನು ಕಡೆ ಗೆಣಿಸುತ್ತಿರುವುದು ಕಂದನಿಯವಾಗಿದೆ. ಕಾರ್ಪೊರೇಟರ್ ಕಂಪನಿಗಳ ಉದ್ದಾರಕ್ಕಾಗಿ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರಿಗೆ ದ್ರೋಹ ವೆಸಗುತ್ತಿದ್ದಾರೆ, ಈ ವಿಚಾರವಾಗಿ ದಿಲ್ಲಿ ಚಲೋ ಚಳುವಳಿಯಲ್ಲಿ ಭಾಗವಹಿಸಿರುವ ರೈತರಿಗೆ ಬೆಂಬಲ ನೀಡುತ್ತಾ ದೇಶದ್ಯಂತ ನಮ್ಮ ರೈತ ಸಂಘಟನೆಗಳಿಂದ ಪ್ರತಿಭಟನೆಗಳನ್ನು ಹಮ್ಮಿ ಕೊಳ್ಳಲಾಗಿದೆ ಹಾಗೂ ನಮ್ಮ ರೈತರಿಗೆ ನ್ಯಾಯ ಸಿಗುವುದು ತನಕ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ಪಿ. ಆರ್. ಸೂರ್ಯನಾರಾಯಣ ತಿಳಿಸಿದರು.ಇದೇ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಎನ್. ಜಿ.ಶ್ರೀರಾಮರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ಕೂಡಲೇ ನಮ್ಮ ರೈತರ ಬೇಡಿಕೆಗಳಾದ ಕೃಷಿ ಸಂಬಂಧಿತ ಮೂರು ಕಾಯ್ದೆಗಳಾದ ವಿದ್ಯುತ್ ಕಾಯ್ದೆ ತಿದ್ದುಪಡಿ – 2020, ಡಾ.ಎಂ.ಎಸ್.ಸ್ವಾಮೀನಾಥನ್ ರವರ ವರದಿಯನ್ವಯ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನು ಹಾಗೂ ಎಲ್ಲಾ ರೈತರು, ಕೃಷಿ ಕೂಲಿಕಾರರು, ಗ್ರಾಮೀಣ ಪ್ರದೇಶದ ಬಡವರಿಗೆ ಕಡಿಮೆ ಬಡ್ಡಿಯ ಬ್ಯಾಂಕ್ ಸಾಲಗಳ ನೀಡಿಕೆಗಳಂತಹ ಋಣ ಮುಕ್ತ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಇಲ್ಲದಿದ್ದಲ್ಲಿ ನಮ್ಮ ಹೋರಾಟ ಉಗ್ರ ರೂಪವನ್ನು ತಾಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಹೆಚ್ಚರಿಕೆ ನೀಡಿದರು.
ವರದಿ- ರಾಮಪ್ಪ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ.

Click to comment

Trending

Exit mobile version