Uncategorized

ಚುನಾವಣಾ ಆಯೋಗ ತನಿಖೆ ನಡೆಸಲಿ: ಶಾಸಕ ಸುರೇಶ್ ಗೌಡ..!

Published

on

ನಾಗಮಂಗಲ: ಮೈತ್ರಿ ಸರ್ಕಾರದ ಪತನದ ನಂತರ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಮೂಲ ಮತ್ತು ವಲಸಿಗರ ವಾಕ್ಸಮರ ದಿನದಿಂದ ದಿನಕ್ಕೆ ತಾರಕ್ಕಕ್ಕೇರುತ್ತಿರುವುದು ಬಹಿರಂಗ ಸತ್ಯ. ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟಿನ ನಡುವೆ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆಗೆ ರಾಜ್ಯ ರಾಜಕೀಯ ಪಡಸಾಲೆಯ ಚರ್ಚೆ ವ್ಯಾಪಕವಾಗಿದೆ. ಇದೇ ವಿಷಯವಾಗಿ ಸಕ್ಕರೆನಾಡು ಮಂಡ್ಯ ಜಿಲ್ಲೆ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಗೌಡರ ಹೇಳಿಕೆ ಹೀಗಿದೆ. ಚುನಾವಣೆಯಲ್ಲಿ ಹಣ ಬಳಕೆ ವಿಷಯದ ಬಹಿರಂಗ ಹೇಳಿಕೆಯೇ ಅಕ್ಷಮ್ಯ ಅಪರಾಧವಾಗಿದ್ದು ಚುನಾವಣಾ ಆಯೋಗದಿಂದ ನಿಷ್ಪಕ್ಷಪಾತ ತನಿಖೆಯಾಗಬೇಕಿದೆ. ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ನಾಗಮಂಗಲ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕರು ಹುಣಸೂರು ಉಪಚುನಾವಣೆಗೆ ಸಿ.ಎಂ. ಯಡಿಯೂರಪ್ಪ ದೊಡ್ಡಮಟ್ಟದ ಹಣ ಕಳುಸಿದ್ದರು ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ತನಿಖೆಯಾಗಬೇಕು.ಆಯೋಗದಿಂದ ನಿಷ್ಪಕ್ಷಪಾತ ತನಿಖೆಯಾದರೆ ಹಣದ ಮೂಲ ಬಹಿರಂಗವಾಗಲು ಸಾಧ್ಯ. ಆದರೆ ವಿರೋದ ಪಕ್ಷದವರಾಗಿದ್ದರೆ ತನಿಖೆ ಯಾಗುತ್ತಿತ್ತು ಆಡಳಿತ ಪಕ್ಷವಾಗಿರುವುದರಿಂದ ತನಿಖೆಯಾಗೋದು ಡೌಟು ಎಂದರು. ಇನ್ನೂ ವಿಶ್ವನಾಥ್ ಗೆ ಸಚಿವ ಸ್ಥಾನ ಕೈ ತಪ್ಪಿರುವ ಬಗ್ಗೆ ಮಾತನಾಡಿದ ಅವರು ನಾನೊಂದು ಬಗೆದರೆ-ದೇವರೊಂದು ಬಗೆದಂತೆ ಮಾಡಿದ್ದುಣ್ಣೋ ಮಾಹರಾಯ ಎಂಬ ಗಾದೆ ಸುಳ್ಳಗಲಾರದು ಎಂದು ಟೀಕಿಸಿದರಲ್ಲದೆಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು ಎಂದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಬಗ್ಗೆ ವಿಶ್ವನಾಥ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಗ್ರಾಮ ಪಂಚಾಯತಿ ಚುನಾವಣೆ, ಕಾರ್ಯಕರ್ತರ ಚುನಾವಣೆಯಾಗಿದೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿಯುವ ಭರವಸೆ ಇದ್ದು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದರು.ಈ ವೇಳೆ ತಾ.ಪಂ.ಅದ್ಯಕ್ಷ ದಾಸೇಗೌಡ, ಮುಖಂಡರಾದ ಬೋಗಾದಿ ನರಸಿಂಹಮೂರ್ತಿ, ಕಲ್ಲೇನಹಳ್ಳಿ ದಿನೇಶ್, ಪ್ರವೀಣ್, ಮುಂತಾದವರಿದ್ದರು.

ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version