Uncategorized

ಕೊರೊನಾ ಮದ್ಯ ಕ್ರಿಕೆಟ್ ಕ್ರೀಡೆಯಿಂದ ಮನರಂಜನೆ..!

Published

on

ಇಂಡಿ: ಕೊರೊನಾ ಮದ್ಯ ಕ್ರಿಕೆಟ್ ಕ್ರೀಡೆಯಿಂದ ಮನರಂಜನೆ, ಹೌದು ಈಡಿ ಜಗತ್ತಿಗೆ ಭಯಾನಕ ವಾತವರಣ ಸೃಷ್ಟಿ ಮಾಡಿರುವ ಕೊರೊನಾ ಪ್ರತಿಯೊಬ್ಬರ ಮಾನಸಿಕ ಅನಾರೋಗ್ಯ ದತ್ತ ಸೆಳೆದಿತ್ತು.ಆದರೆ ಒಳ್ಳೆಯ ಆರೋಗ್ಯಕ್ಕೇ ಆಟವೂ ಮುಖ್ಯ ಎಂದು ಶ್ರೀ ಶಾಂತೇಶ್ವರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು. ವಿಜಯಪುರ ಜಿಲ್ಲೆಯ ಇಂಡಿ ನಗರದ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮತ್ಯವಾಗಿ ಕ್ರಿಕೇಟ್ ಜಿಆರ್ ಜಿ ಕಾಲೇಜ್ ಆವರಣದಲ್ಲಿ ಟೂರ್ನಮೆಂಟ್ ಎರ್ಪಡಿಸಲಾಗಿತ್ತು. ಒಟ್ಟು ಐದು ತಂಡಗಳಿಂದ ಆರಂಭವಾದ ಕ್ರೀಡೆ ಭಾನುವಾರ ಪೈನಲ್ ಆಟಕ್ಕೆ ಡಿ ಹಂಟರ್ ತಂಡ ಹಾಗೂ SB ಬಾಯ್ಸ್ ತಂಡ ಸ್ಪರ್ದೆಗೆ ಅಣಿಯಾಗಿದ್ದವು. ಕೊನೆಯ ಪಂದ್ಯಕ್ಕೆ ಅಧಿಕೃತ ವಾಗಿ ನಾಣ್ಯ ಚಿಮ್ಮುವ ಮೂಲಕ ಕ್ರಿಕೆಟ್ ಆಟಕ್ಕೆ ಇಂಡಿ ಪ್ರಿನ್ಸಿಪಲ್ ಸಿವಿಲ್ ಕೊರ್ಟ ನ್ಯಾಯದೀಶ ಅಲ್ತಾಪ್ ಹುಸೇನಿ ಖನಗಾವಿ ಚಾಲನೆ ನೀಡಿದರು. ತದನಂತರ ಸಿಪಿಐ ರಾಜಶೇಖರ ಬ್ಯಾಟ್ ಬಿಸಿದ್ರೆ ನಗರ ಪಿಎಸ್ಐ ಮಾಳಪ್ಪ ಪೂಜಾರಿ ಬೌಲ್ ಮಾಡುವ ಮೂಲಕ ಕ್ರೀಡಾ ಅಭೀಮಾನಿಗಳಿಗೆ ಮೊನೊ ಉಲ್ಲಾಸ ತುಂಬಿದರು. ಕ್ರೀಡಾಭಿಮಾನಿಗಳಿಗೆ ಅಲ್ಪ ಉಪಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version