ಸಿನಿಮಾ

28ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ್..!

Published

on

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಬಹು ಬೇಡಿಕೆಯ ನಟಿ ನೆಂದು ಗುರುತಿಸಿಕೊಂಡಿರುವ ನಟಿ ಶಾನ್ವಿಶ್ರೀವಾಸ್ತವ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವರು ಕನ್ನಡದಲ್ಲಷ್ಟೇ ಅಲ್ಲದೇ ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮೂಲತಹ ಕೇರಳದ ವಾರಣಾಸಿಯಲ್ಲಿ 1992 ಡಿಸೆಂಬರ್8ರಂದು ಜನಿಸಿದರು. ಮೊದಲ ಬಾರಿಗೆ 2012 ರಲ್ಲಿ ತೆಲುಗಿನ ಲವ್ಲಿ ಚಿತ್ರದಲ್ಲಿ ನಟಿಸುವ ಮೂಲಕ ತನ್ನ ಸಿನಿ ಜರ್ನಿಯನ್ನು ಪ್ರಾರಂಭ ಮಾಡಿದ್ದು, ಅಡ್ಡಾ ,ರೌಡಿ, ಚಿತ್ರಗಳಲ್ಲೂ ಕೂಡ ನಟಿದಸಿದ್ದರು.2014 ರಲ್ಲಿ ಕನ್ನಡದಲ್ಲಿ ಚಂದ್ರಲೇಖಾ ಚಿತ್ರದ ಮೂಲಕ ಕನ್ಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶಾನ್ವಿ ಕನ್ನಡದಲ್ಲಿ ಒಂದರ ಮೇಲೊಂದು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಗೆ ನಾಯಕಿ ಯಾಗಿ ಮಾಸ್ಟರ್ ಫೀಸ್, ಹಾಗೂ ರಕ್ಷೀತ್ ಶೇಟ್ಟಿಗೆ ನಾಯಕಿಯಾಗಿ ಶ್ರೀಮನ್ನಾರಾಯಣ ಚಿತ್ರದಲ್ಲೂ ನಟಿಸಿ ಪ್ರೇಕ್ಷಕರ ಮನಗೆದ್ದಿಉ ಕನ್ನಡ ಚಿತ್ರರಂಗದಲ್ಲಿ ಇದೀಗ ಗಟ್ಟಿಯಾಗಿ ನೆಲೆಯೂರಿದ್ದಾರೆ. ಇತ್ತೀಚೆಗಷ್ಟೇ ಮಾಲ್ಡೀವ್ಸ್ ನಲ್ಲಿ ಹಾಲಿಡೇಸ್ ಎಂಜಾಯ್ ಮಾಡುತ್ತಿರುವ ನಟಿ ಸಾನ್ವಿ ಲಾಕ್ ಡೌನ್ ಬಳಿಕ ಕೆಲವೊಂದು ಚಿತ್ರಗಳಿಗೆ ಸಹಿ ಮಾಡಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇಂದು ನಟಿ ಶಾನ್ವಿ 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಕಾರಣದಿಂದಾಗಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದು, ಅಭಿಮಾನಿ ಬಳಗದವರು, ಸ್ನೇಹಿತರು ನಟಿ ಶಾನ್ವಿಶ್ರೀವಾಸ್ತವ್ ಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version