ರಾಯಚೂರು

ಕೊರೋನಾ ಸಾಂಕ್ರಮಿಕ ಪಿಡುಗಿನ ವೇಳೆ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕು- ಕೆ.ಪಿ.ಅನೀಲ್ ಕುಮಾರ್..!

Published

on

ರಾಯಚೂರು- ಕೊರೋನಾ ಸಾಂಕ್ರಮಿಕ ಪಿಡುಗಿನ ವೇಳೆ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕೆಂದು ಸಾಮಾಜಿಕ ಪರಿವರ್ತನ ಜನಾಂದೋಲನಾ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಪಿ.ಅನೀಲ್ ಕುಮಾರ್ ಸರ್ಕಾರಕ್ಕೆ ಆಗ್ರಹಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿ, ಈ ಸಾಂಕ್ರಮಿಕ ರೋಗದಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಆಗಿದೆ. ಆದಾಯವಿಲ್ಲದೆ ಬದುಕು ಮೂರಾಬಟ್ಟಿಯಾಗಿದೆ. ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು ಸ್ಲಂ ನಿವಾಸಿಗಳು ಮತ್ತು ಕೃಷಿ ಕಾರ್ಮಿಕರ ಪರಿಸ್ಥಿತಿ ನೋಡದಂತಾಗಿದೆ. ಇದರ ಪರಿಣಾಮ ಮಕ್ಕಳ ಮೇಲೆ ಬೀರಿದೆ ಎಂದು ಹೇಳಿದರು. ಅಂಗನವಾಡಿಗಳು ಮುಚ್ಚಿದ್ದರಿಂದ ಹಸಿವು ಮತ್ತು ಅಪೌಷ್ಟಿಕತೆ ಕಿತ್ತು ತಿನ್ನುತ್ತಿದೆ. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ದೊರೆಯುತ್ತಿದ್ದ ಕ ಪೌಷ್ಟಿಕ ಆಹಾರ, ಹಾಲು,ಮೊಟ್ಟೆಗೆ ಕತ್ತರಿಬಿದ್ದಿದೆ. ಇದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಹೆಚ್ಚಾಗುತ್ತಿದ್ದಾರೆ. ಬಾಣಂತಿಯರು, ಗರ್ಭೀಣಿಯರು ಮತ್ತು ಕಿಶೋರಿಯರು ಕೂಡ ಅಂಗನವಾಡಿಗಳಿಂದ ವಂಚಿತರಾಗಿದ್ದಾರೆ. ಕೂಡಲೇ ಈ ಕುರಿತು ಕ್ರಮ ಕೈಗೊಂಡು ಸರ್ಕಾರ ಅಂಗನವಾಡಿಗಳನ್ನು ತೆರೆದು ಮಕ್ಕಳ ಹಕ್ಕುಗಳಾದ ಪೌಷ್ಠಿಕ ಆಹಾರದ ಹಕ್ಕು ನೀಡಬೇಕಾಗಿದೆ ಎಂದು ಆಗ್ರಹಿಸಿದರು. ಹಾಗೆಯೇ ಅಂಗನವಾಡಿ ಶಾಲಾ ಪೂರ್ವ ಶಿಕ್ಷಣದ ಮೂಲಕ ಮಕ್ಕಳು ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಯ ಜೊತೆಗೆ ಭಾಷೆ,ಆಲೋಚನೆ ಕಲಿಯುವ ಸಾಮಾರ್ಥ್ಯದ ವಿಕಾಸನವಾಗುತ್ತದೆ. ಪ್ರಸ್ತುತ ಅಂಗನವಾಡಿಗಳು ಮುಚ್ಚಿದ್ದರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣವಿಲ್ಲದಂತಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಜನಾರ್ಧನ್ ಅರಳಿಬೆಂಚಿ, ಮಲ್ಲೇಶ, ವೆಂಕಟೇಶ, ನರಸಿಂಹಲು ಸೇರಿ ಅನೇಕರು ಇದ್ದರು.

ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Click to comment

Trending

Exit mobile version