Uncategorized

ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಚಿಂತನಾಗೋಷ್ಠಿ…!

Published

on

ಇಂಡಿ: ಐತಿಹಾಸಿಕ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಾಂತೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ, ಕರ್ನಾಟಕ ರಾಜ್ಯ ಸರಕಾರಿ ನೌಕರ ತಾಲೂಕು ಶಾಖೆ ಹಾಗೂ ಷಡಾಕ್ಷರಿ ಅಭಿಮಾನಿ ಬಳಗ ವತಿಯಿಂದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಚಿಂತನಾ ಗೊಷ್ಠಿ ಹಾಗೂ ಸರಕಾರಿ ನೌಕರರು ಹಾಗೂ ಶಿಕ್ಷಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ರಾಜ್ಯಧ್ಯಕ್ಷ ಶ್ರೀ ಎಸ್ ಷಡಕ್ಷರಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯದ್ಯಕ್ಷ ಶ್ರೀ ಸಿ ಎಸ್ ಷಡಕ್ಷರಿ ಮಾತಾನಾಡಿ ಸರಕಾರ ನಮ್ಮ ಸರಕಾರಿ ನೌಕರರ ಸಮಸ್ಯೆಗಳು ಆಲಿಸಿದ್ದರೆ, ಪರಿಹರಿಸಿದ್ದರೆ 6 ಲಕ್ಷ ನೌಕರ ಜೊತೆ ಕುಟುಂಬ ಸದಸ್ಯರು ಸೇರಿ 25 ಲಕ್ಷ ಜನ ಹೋರಾಟ ಮಾಡಿದ್ರೆ, ಎಲ್ಲಾ ಸರಕಾರಿ ಕಾರ್ಯ ಚಟುವಟಿಕೆ ಸ್ತಬ್ದಗೊಳ್ಳುತ್ತೆವೆ ಎಂದು ಹೇಳಿದರು. ಕೊವಿಡ್ – ನೇರೆ ಹಾವಳಿಗೆ ಸರಕಾರಿ ನೌಕರಸ್ಥರು ವೇತನದಲ್ಲಿ ಸಹಕಾರ ಮಾಡಿ ಮಾನವಿಯಿತೆ ಮೆರೆಯುತ್ತಿದ್ದಾರೆ. ಆದರೆ ಸರಕಾರ ಇನ್ನೂ ಸರಕಾರಿ ಅಧಿಕಾರಿಗಳ ಸಮಸ್ಯೆಗಳು ತುಂಬಿಕೊಂಡಿವೆ. ಆ ಸಮಸ್ಯೆಗಳ ಕೂಡಲೇ ಪರಿಹರಿಸಬೇಕು ಒಂದು ವೇಳೆ ಪರಿಹರಿಯದಿದ್ರೆ ಬಿದಿಗಿಳಿದು ಹೋರಾಟ ಮಾಡುತ್ತೆವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿರುವ ನೌಕರ ಸಂಘದ ಶ್ರೀ ಶಂಕರ್ ಗೌಡ ಪಾಟೀಲ್ ವಹಿಸಿಕೊಂಡು ಶಿಕ್ಷಕರು ಸಮಸ್ಯೆಗಳನ್ನ ಕೇವಲ ಮನವಿ ಪತ್ರಗಳಲ್ಲಿ ಸ್ವೀಕಾರ ಮಾಡಿ ಅದನ್ನೆ ಹಾಗೆ ಬದಿಗೊತ್ತಿ ರಾಜಕೀಯ ಕ್ಷೆತ್ರಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾರೂ ಸಮಸ್ಯಗಳಿಗೆ ತಾತ್ವಿಕ ನಾಂದಿಹಾಡಲು ಪ್ರಯತ್ನಿಸಿಲ್ಲ. ಇವತ್ತು ಶಿಕ್ಷಕರಿಗೆ ಎನ್ ಪಿ ಎಸ್ ಎಂಬ ಯೋಜನೆ ಭೂತವಾಗಿ ಕಾಡುತ್ತಿದೆ. ಎನ್ ಪಿ ಎಸ್ ಅಡಿಯಲ್ಲಿ ಬರುವ ಶಿಕ್ಷಕರ ಜೀವನ ಬಹಳ ಗಂಬೀರ ಪರಿಸ್ಥಿತಿ ಯಲ್ಲಿದೆ ಎಂದು ಹೇಳಿದರು. ಇಂತಹ ಸಂದರ್ಭದಲ್ಲಿ ರಾಜ್ಯದ್ಯಕ್ಷರು ಕೂಡಲೆ ಎನ್ ಪಿ ಎಸ್ ಯೋಜನೆ ರದ್ದು ಮಾಡಿ ಕೇಂದ್ರ ಸರಕಾರದ ಮಾದರಿ ವೇತನ ಸಿಗುವಂತೆ ಮಾಡಬೇಕು ಎಂದು ವಿನಂತಿಸಿಕೊಂಡರು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version