Uncategorized

ಇದ್ದಕ್ಕಿದ್ದಂತೆ ಚಲಿಸಿದ ಟೆಂಪೋ: ಗಾಬರಿಗೊಂಡ ಸಾರ್ವಜನಿಕರು..!

Published

on

ಮಾಲೂರು: ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದ ಚಾಲಕ ರಸ್ತೆ ಪಕ್ಕ ಟೆಂಪೋ ನಿಲ್ಲಿಸಿ ಪೂಜೆಗೆಂದು ಒಳಗೆ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ವಾಹನ ಚಲಿಸಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ವೇಳೆ, ರಸ್ತೆ ಪಕ್ಕ ನಿಂತಿದ್ದ ಇಬ್ಬರು ಕೂದಲೇಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ದೇವಸ್ಥಾನದ ಮುಂದೆಯೇ ಇದ್ದ ಅಂಗಡಿಗೆ ಟೆಂಪೊ ನುಗ್ಗಿದ್ದರಿಂದ ಪೂಜಾ ಸಾಮಗ್ರಿಗಳು ಜಖಂ ಆಗಿದ್ದು, ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಮಾಲೂರು

Click to comment

Trending

Exit mobile version