ಬೆಂಗಳೂರು

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಡ್ಯಾನಿಶ್..!

Published

on

ಬೆಂಗಳೂರು: ಕನ್ನಡದ ಜನಕ್ಕೆ ತನ್ನ ಹಾಸ್ಯದ ಮೂಲಕವೇ ಹತ್ತಿರವಾಗಿರುವ ನಟ ಡ್ಯಾನಿಶ್ ಸೇಠ್ ಇದೀಗ ತನ್ನ ಗೆಳತಿ ಅನ್ಯಾ ರಂಗಸ್ವಾಮಿಗೆ ಪ್ರಪೋಸ್ ಮಾಡಿದ್ದು, ಆಕೆ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಅಪ್ ಡೇಟ್ ಬಗ್ಗೆ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮಾಹಿತಿ ನೀಡಿರುವ ಡ್ಯಾನಿಶ್, ತಾವು ತುಂಬಾ ಸಂತೋಷವಾಗಿರುವುದಾಗಿ ಹೇಳಿದ್ದಾರೆ. ನಿನ್ನೆ ಡ್ಯಾನಿಶ್ ಅನ್ಯಾ ಜೊತೆ ಇರುವ ತನ್ನ ಬ್ಲಾಕ್ ಅಂಡ್ ವೈಟ್ ಚಿತ್ರವನ್ನುಪೋಸ್ಟ್ ಮಾಡಿ, ತನ್ನ ಜೀವನವನ್ನು ಆಕೆಯೊಂದಿಗೆ ಕಳೆಯಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಡ್ಯಾನಿಶ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಮೆಂಟ್ಸ್ ವಿಭಾಗದಲ್ಲಿ 24 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಅಭಿನಂದನಾ ಸಂದೇಶಗಳು ಹರಿದು ಬಂದಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version