Uncategorized

ಗಾಳಿಪಟದ ಜೊತೆಗೆ ಹಾರಿದ 12 ವರ್ಷದ ಬಾಲಕ..!

Published

on

ಜಕಾರ್ತ:ಇಲ್ಲಿನ ಇಂಡೋನೇಷಿಯಾದ ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ 12 ವರ್ಷದ ಬಾಲಕನನ್ನು ಗಾಳಿಪಟ ಎಳೆದೊಯ್ದ ಘಟನೆ ವರದಿಯಾಗಿದೆ. ಬಾಲಕ 30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಲಿಂದ ಬಿದ್ದ ಬಾಲಕನ ಕೈ ಮೂಳೆ ಮುರಿದಿದೆ ಎಂದು ವರದಿಯಾಗಿದೆ. ಬಾಲಕ ತನಗಿಂತ ಸುಮಾರು ಮೂರು ಪಟ್ಟು ದೊಡ್ಡದಾದ ಡ್ರ್ಯಾಗನ್ ಪತಂಗವನ್ನು ಹಾರಿಸಿದ ಪರಿಣಾಮ 30 ಅಡಿ ಎತ್ತರಕ್ಕೆ ಗಾಳಿಪಟದ ಜತೆ ಹಾರಿರುವ ಈ ಬಾಲಕ ನಂತರ ಗಾಳಿಪಟದ ದಾರ ತುಂಡಾಗಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ರಭಸವಾಗಿ ಗಾಳಿ ಬೀಸುತ್ತಿತ್ತು. ಬಾಲಕ ಡ್ರ್ಯಾಗನ್ ಗಾಳಿಪಟದ ತಂತಿಗೆ ಸಿಲುಕಿಕೊಂಡಿದ್ದು ಗಾಳಿಪಟ ತನ್ನ ಜತೆಗೆ ಬಾಲಕನನ್ನೂ ಎಳೆದೊಯ್ದಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version