ಬೆಂಗಳೂರು

ಸರಿಯಾಗಿ ವೇತನ ನೀಡದ ಆರೋಪ- ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರಿಂದಲೇ ದಾಂಧಲೆ..!

Published

on

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರದಲ್ಲಿರುವ ತೈವಾನ್ ಮೂಲದ ಐಫೋನ್‌ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಉದ್ಯೋಗಿಗಳು ಐ-ಫೋನ್ ಉತ್ಪಾದನಾ ಘಟಕದಲ್ಲಿ ದಾಂದಲೆ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಐ-ಫೋನ್ ಉತ್ಪಾದನಾ ಘಟಕಕ್ಕೆ ನುಗ್ಗಿದ ಜನರು ಅಲ್ಲಿನ ಪೀಠೋಪಕರಣಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಭಾರೀ ಪ್ರಮಾಣದಲ್ಲಿ ಗ್ಲಾಸ್‌ಗಳನ್ನೆಲ್ಲಾ ಪುಡಿ ಮಾಡಲಾಗಿದೆ. ಜೊತೆಗೆ ಕಾರುಗಳನ್ನು ಕೂಡ ಜಖಂಗೊಳಿಸಲಾಗಿದೆ. ತೈವಾನ್ ಮೂಲದ ಐ-ಫೋನ್ ಉತ್ಪಾದನಾ ಘಟಕವನ್ನು ವಿಸ್ಟ್ರಾನ್ ಕಾರ್ಪ್ ಮುನ್ನಡೆಸುತ್ತಿತ್ತು. ಕಂಪನಿಯು ಸರಿಯಾದ ಸಮಯಕ್ಕೆ ವೇತನ ನೀಡದೆ ಸತಾಯಿಸುತ್ತಿದೆ ಎಂಬುದು ಅಲ್ಲಿನ ನೌಕರರ ಆರೋಪವಾಗಿದೆ. ಸ್ಥಳೀಯ ಪೊಲೀಸರು ಐ-ಫೋನ್ ಉತ್ಪಾದನಾ ಘಟಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version