ತಿಪಟೂರು

ಕೆ.ಎಸ್.ಆರ್.ಟಿ.ಸಿ ಬಸ್ ಇಲ್ಲದೆ ಜನರ ಪರದಾಟ..!

Published

on

ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊ0ಡು ರಾಜ್ಯದ 4 ಸಾರಿಗೆ ಸಂಸ್ಥೆಗಳ ನೌಕರರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಬಿಸಿ ಕಲ್ಪತರು ನಾಡು ತಿಪಟೂರನ್ನು ಬಹುವಾಗಿ ಕಾಡಿತು. ಎಂದಿನ0ತೆ ಇಂದು ಬೆಳಗ್ಗೆ ತಮ್ಮ ನಿತ್ಯದ ಕಾಯಕಕ್ಕೆ ಹಾಗೂ ವಿವಿಧ ಸ್ಥಳಕ್ಕೆ ಪ್ರಯಾಣ ಬೆಳಸಲು ಬಂದ ನೌಕರರು ಹಾಗೂ ಪ್ರಯಾಣಿಕರಿಗೆ ಕೆ.ಎಸ್.ಆರ್.ಟಿ ನೌಕರರ ಪ್ರತಿಭಟನೆಯಿಂದ ಒಂದು ಕ್ಷಣ ದಿಗಿಲಿ ಗೀಡಾದರು. ಈ ಪ್ರತಿಭಟನೆಯಿಂದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾದೆ. ಕೆ.ಎಸ್.ಆರ್.ಟಿ.ಸಿ ನೌಕರರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು,ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೊರೊನಾ ಪ್ರಭಾವದಿಂದ ಖಾಸಗಿ ಬಸ್ಗಳು ಸಾಕಷ್ಟು ಇಲ್ಲದ್ದರಿಂದ ಹಾಗು ಇಂದು ಬೆಳಗ್ಗೆ ಬೇರೆ ಬೇರೆ ಉಳಿದಿದ್ದ ಬಸ್ಗಳಲ್ಲಿ ಕಾಲೇಜು,ಟ್ಯೂಷನ್ಗೆ ಬಂದ ವಿದ್ಯಾರ್ಥಿಗಳಿಗೆ ಹಾಗೂ ತಮ್ಮ ನಿತ್ಯದ ಕೆಲಸಗಳಾದ ಆಸ್ಪತ್ರೆ, ಬ್ಯಾಂಕ್ ಮುಂತಾದ ಕೆಲಸಗಳಿಗಾಗಿ ಬಂದಿ0ದ ವಯೋವೃದ್ಧರಿಗೂ ಸಹ ಮತ್ತೆ ಮನೆಗೆ ತೆರಳಲು ಬಸ್ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಇನ್ನೂ ಪ್ರತಿಭಟನಕಾರರು, ನಾವು ಇಷ್ಟು ದಿನ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತದೆ ಎಂದು ಸುಮ್ಮನಿದ್ದೇವು,ಮನೆಯಲ್ಲಿ ನಾವೊಬ್ಬರೇ ದುಡಿಯುವವರು ಇವರು ಕೊಡುವ 13 ಸಾವಿರ ಸಂಬಳ ಯಾವುದಕ್ಕೂ ಸಾಕಾಗುತ್ತಿಲ್ಲ, ವಯೋವೃದ್ಧ, ಪೋಷಕರ ಆಸ್ಪತ್ರೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಇವುಗಳನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ, ಇನ್ನಾ ನಮ್ಮ ಜೀವನ ಸಾಗಿಸುವುದು ಹೇಗೆ, ಇಷೆಲ್ಲಾ ಕಷ್ಟಗಳ ನಡುವೆ ನಾವು ಸಾರ್ವಜನಿಕರಿಗಾಗಿ ದುಡಿಯುತ್ತಿದ್ದು ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸೂಕ್ತ ಸಂಬಳವನ್ನು ನೀಡಿ ಎಂಬುವುದಷ್ಟೇ ನಮ್ಮ ಬೇಡಿಕೆ ,ನಾವು ಸರ್ಕಾರದ ವಿರೋಧಿಗಳೇನು ಅಲ್ಲ, ನಮ್ಮ ಮುಷ್ಖರ ಅನಿರ್ಧಿಷ್ಟಾವದಿಯಾದ್ದಾಗಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆಯನ್ನು ಕೈ ಬಿಡುವುದಿಲ್ಲವೆಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ- ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version