ಬೆಂಗಳೂರು

ಡ್ರಾಪ್ ಕೊಡೊ ನೆಪದಲ್ಲಿ ಯುವತಿಯ ಮೇಲೆರಗಿದ ಆಟೋ ಚಾಲಕ..!

Published

on

ಬೆಂಗಳೂರು: ಬಸ್ಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಆಟೋಗೆ ಹತ್ತಿಸಿಕೊಂಡು ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಅಭ್ಯಾಸ ಮಾಡುತ್ತಿರುವ ಯುವತಿಯೊಬ್ಬಳು, ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಥಣಿ ಸಂದ್ರ ಮುಖ್ಯ ರಸ್ತೆಯಲ್ಲಿ ಬಸ್ಸಿಗಾಗಿ ಕಾಯತ್ತಿದ್ದ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಆರೋಪಿ ಮುಬಾರಕ್‌ ಎನ್ನುವ ಆಟೋ ಚಾಲಕ ಆಕೆ ತಲುಪಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ನಟಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ ತಾನು ಹೋಗ ಬೇಕಾದ ಸ್ಥಳವನ್ನು ತಲುಪದೇ ಬೇರೆ ಜಾಗದ ಕಡೆ ಆಟೋ ಚಾಲಕ ಹೋಗುತ್ತಿರುವುದನ್ನು ಯುವತಿ ಗಮನಿಸಿ, ಕಿಚಾಡಲು ಶುರುಮಾಡಿದ್ದಾಳೆ, ಆದರೆ ಆಟೋ ಚಾಲಕ ತನಗೆ ಬೇಕಾಗಿರುವವರು ಹಣ ನೀಡಬೇಕಾಗಿದೆ ಅಲ್ಲಿಗೆ ತೆರಳಿ ಹಣ ಪಡೆದುಕೊಂಡು ನಿಮ್ಮನ್ನು ನಿಮ್ಮ ಜಾಗಕ್ಕೆ ಬಿಡುವೆ ಅಂತ ಹೇಳಿದ್ದಾನಂತೆ. ಆದರೆ ಆ ಕಾಮುಕ ಆಟೋ ಚಾಲಕ ಆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಬಳಿಕ ಯುವತಿ ನಿರ್ಜನ ಪ್ರದೇಶದಿಂದ ರಸ್ತೆಗೆ ಬಂದು ರೋಡ್ ನಲ್ಲಿ ತೆರಳುತ್ತಿದ್ದ ಬೈಕ್‌ ಸವಾರರೊಬ್ಬರ ಸಹಾಯದಿಂದ ಸಂಪಿಗೆ ಹಳ್ಳಿ ಪೊಲೀಸ್‌ ಠಾಣೆಗೆ ಆಗಮಿಸಿ, ನಡೆದ ಘಟನೆಯನ್ನು ವಿವರಿಸಿದ್ದಾಳೆ, ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಯುವತಿ ನೀಡಿದ ಆಟೋ ಸಂಖ್ಯೆಯಿಂದ ಅತ್ಯಾಚಾರಿ ಮುಬರಕ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version