ಚಿಕ್ಕಬಳ್ಳಾಪುರ

ಆರೋಗ್ಯ ಸಚಿವರ ತವರೂರಲ್ಲೇ ಬೃಹತ್ ಮಟ್ಟದ ಭ್ರಷ್ಟಾಚಾರ-ಕೋಟಿ ಕೊಟಿ ಹಣ ಗುಳುಂ ಮಾಡಿದ ಅಧಿಕಾರಿಗಳು..!

Published

on

ಚಿಕ್ಕಬಳ್ಳಾಪುರ: ಅದು ಆರೋಗ್ಯ ಸಚಿವರ ತವರೂರು. ಹಾಗಾಗಿ ಇಲ್ಲಿ ಆರೋಗ್ಯ ಇಲಾಖೆಯಲ್ಲಿ ಎಲ್ಲಾ ಪಕ್ಕಾ ಇರುತ್ತೆ ಅನ್ನೋದು ಸಾಮಾನ್ಯರ ಕಲ್ಪನೆ. ಆದ್ರೆ ನೀವೇನಾದ್ರು ಅಂದುಕೊಂಡ್ರೆ ನಿಮ್ಮ ಊಹೆ ಖಂಡಿತಾ ತಪ್ಪು. ಸಚಿವರ ಊರಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಬಯಲಾಗಿದೆ.

ಹೌದು..ಇದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆ, ಆದ್ರೆ ಅವರ ತವರು ಜಿಲ್ಲೆಯಲ್ಲಿಯೇ ಇರೋ ಆಸ್ಪತ್ರೆಯಲ್ಲೇ ಲಕ್ಷ ಲಕ್ಷ ಹಣ ದುರುಪಯೋಗವಾಗಿರೋದು ತಡವಾಗಿ ಬೆಳಕಿಗೆ ಬಂದಿದೆ.ಇಲ್ಲಿನ ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಎಆರ್ ಎಸ್ ಕಾಮಗಾರಿಗಳಿಗಾಗಿ ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕ ಶಶಿಕುಮಾರ್ ಮತ್ತು ಗುತ್ತಿಗೆದಾರರು ಸೇರಿ ಹತ್ತು ಲಕ್ಷಕ್ಕೂ ಅಧಿಕ ಹಣ ಗುಳುಂ ಮಾಡಿದ್ದಾರೆ. ನಗರದ ಸತ್ಯದೇವ್ ಇಂಜಿನಿಯರಿಂಗ್ ಮತ್ತು ಪೈಂಟಿಂಗ್ ವರ್ಕ್ ಒಂದನೇ ಕಾರ್ಮಿಕ ನಗರ ಶಿಡ್ಲಘಟ್ಟ ಎಂಬ ಅಂಗಡಿಯ ಹೆಸರಿನ ಮೇಲೆ ಲೋಕಲ್ ಬಿಲ್ ತಯಾರು ಮಾಡಿ ಹಣ ನುಂಗಿರುವುದು ಬಯಲಾಗಿದೆ. ಇನ್ನು ಸಾರ್ವಜನಿಕರ ಹಣವನ್ನು ಶಶಿಕುಮಾರ್ ದುರುಪಯೋಗಿಸಿ ಕೊಂಡಿದ್ದಾನೆ ಎಂದು ವಿಷಯ ತಿಳಿಯುತ್ತಿದ್ದಂತೆ ಅಕ್ಟೋಬರ್ 1 2019 ರಂದು 3 ಲಕ್ಷ 91 ಸಾವಿರ ಮಾತ್ರ ಜಮಾ ಮಾಡಿ ಬೇರಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ಪ್ರವೀಣ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೂರು ಸಹ ದಾಖಲಿಸಿದ್ದಾರೆ.ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿಯೇ ಬಹುದೊಡ್ಡ ಹಗರಣ ನಡೆದಿದೆ. ದ್ವಿತೀಯ ದರ್ಜೆ ಸಹಾಯಕ ಶಶಿಕುಮಾರ್ ಶಿಡ್ಲಘಟ್ಟ ದ ಮಾಜಿ ಶಾಸಕರ ಸಂಬಂಧಿಯಾಗಿದ್ದು ಲಕ್ಷ ಲಕ್ಷ ಹಣ ಗುಳುಂ ಮಾಡಿದ್ದು ಸಾಬೀತಾಗಿದ್ದರೂ ಸಹಾ ಆತನ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಬೇರೆಡಗೆ ವರ್ಗಾವಣೆ ಮಾಡಿ ಕೈ ತೊಳೆದು ಕೊಂಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ…

ವರದಿ-ಶ್ರೀನಿವಾಸ ಎನ್, ಎಕ್ಸ್ ಪ್ರೆಸ್ ಟಿವಿ, ಚಿಕ್ಕಬಳ್ಳಾಪುರ

Click to comment

Trending

Exit mobile version